Tuesday, May 21, 2024

ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳ ಬೆಲೆ ಸತತ ಎರಡನೇ ಬಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ಹಂತ ಹಂತವಾಗಿ ನಡೆಯುತ್ತಿದ್ದು ಈ ನಡುವೆ ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಸತತ ಎರಡನೇ ಬಾರಿಗೆ ಇಳಿಸಿವೆ.

ಸರ್ಕಾರಿ ತೈಲ ಕಂಪನಿಗಳು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಇಂದಿನಿಂದ ದೇಶದ ವಿವಿಧ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 19 ರೂ.ವರೆಗೆ ಇಳಿಕೆಯಾಗಿದೆ. ಈ ಕಡಿತದ ಪ್ರಯೋಜನವು 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಮೇಲೆ ಮಾತ್ರ ಲಭ್ಯವಿರುತ್ತದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಈ ಬಾರಿಯೂ ಯಾವುದೇ ಬದಲಾವಣೆಯಾಗಿಲ್ಲ.

ಇದನ್ನೂ ಓದಿ: ರೇವಣ್ಣ, ಪ್ರಜ್ವಲ್​ಗೆ SIT ನೋಟೀಸ್​: ಪ್ರಕರಣಕ್ಕೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಎಂಟ್ರಿ

ಇತ್ತೀಚಿನ ಬೆಲೆ ಇಳಿಕೆಯ ನಂತರ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,745.50 ರೂ.ಗೆ ಇಳಿದಿದೆ. ಅದೇ ರೀತಿ ಇಂದಿನಿಂದ ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು 1,859 ರೂ.ಗೆ ಲಭ್ಯವಾಗಲಿದೆ. ಮುಂಬೈನ ಜನರು ಈಗ ಈ ವಾಣಿಜ್ಯ ಸಿಲಿಂಡರ್‌ಗೆ ರೂ 1,698.50 ಪಾವತಿಸಬೇಕಾಗುತ್ತದೆ, ಆದರೆ, ಚೆನ್ನೈನಲ್ಲಿ ಅದರ ಬೆಲೆ ಈಗ ರೂ 1,911 ಆಗಿರುತ್ತದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,844.50 ರೂಪಾಯಿಗಳಿಂದ 1,825.50 ರೂಪಾಯಿಗೆ ತಗ್ಗಿದೆ. ಆದ್ರೆ ದೇಶೀಯ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸವಾಗದೆ 805.50 ರೂಪಾಯಿಗಳಲ್ಲೇ ಉಳಿದಿದೆ.

ಗೃಹಬಳಕೆಯ ಸಿಲಿಂಡರ್‌ ಬೆಲೆ ಯಥಾಸ್ಥಿತಿ:

ಈ ಮಧ್ಯೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್‌ ಬೆಲೆ 805.50 ರೂ. ಇದೆ.

ತೈಲ ಮಾರುಕಟ್ಟೆ ಕಂಪನಿಗಳು ಹಿಂದಿನ ಘೋಷಣೆಯನ್ನು ಮಾರ್ಚ್ 1ರಂದು ಮಾಡಿದ್ದು, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ದರಗಳನ್ನು ಹೆಚ್ಚಿಸಿದ್ದವು. ಆ ಸಮಯದಲ್ಲಿ, OMCಗಳು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 19, ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ₹25ರಷ್ಟು ಹೆಚ್ಚಿಸಿದ್ದವು.

RELATED ARTICLES

Related Articles

TRENDING ARTICLES