Tuesday, May 21, 2024

ಪ್ರಜ್ವಲ್ ರಾಸಲೀಲೆ ಪ್ರಕರಣ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ‘ಪವರ್’ ಟಿವಿ 10 ಪ್ರಶ್ನೆಗಳು

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿದೆ. ಈ ಘಟನೆಯಿಂದ ಮಾಜಿ ಪ್ರಧಾನಿ ದೇವೇಗೌಡ್ರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ಪವರ್ ಟಿವಿ ಹೋರಾಟದ ಬಳಿಕ ಪ್ರಜ್ವಲ್ ರಾಸಲೀಲೆ ತನಿಖೆ ವೇಗ ಪಡೆದುಕೊಳ್ತಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇತ್ತ, ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ದೂರು, ಎಸ್​​ಐಟಿಗೆ ಶಿಫ್ಟ್ ಆಗಿದೆ.

ವಿಕೃತ ಕಾಮಿಯಂತೆ ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಜ್ವಲ್‌ ರೇವಣ್ಣ ತಲೆದಂಡವಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಜೆಡಎಸ್‌ನಿಂದ ಪ್ರಜ್ವಲ್‌ ರೇವಣ್ಣನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ, ಈ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಇದು ಹಳೇ ಪ್ರಕರಣ ಎಂದು ಹೇಳಿಕೆ ನೀಡಿ ಜಾರಿಕೊಳ್ಳುತ್ತಿರುವ ಹೆಚ್.ಡಿ. ಕುಮಾರಸ್ವಾಮಿಗೆ ಪವರ್​ ಟಿವಿ 10 ‘ಪವರ್’ ಫುಲ್ ಪ್ರಶ್ನೆಗಳನ್ನು ಮುಂದಿಟ್ಟಿದೆ.

ದಳಪತಿಗೆಪವರ್’ ಫುಲ್​ ಪ್ರಶ್ನೆಗಳು..!

  • ಪ್ರಶ್ನೆ 1 : ಯಾವ ವರ್ಷದಲ್ಲೇ ನಡೆದಿರಲಿ ತಪ್ಪು ತಪ್ಪೇ ಅಲ್ವಾ?
  • ಪ್ರಶ್ನೆ 2 : 2012ರಲ್ಲಿ ರಾಸಲೀಲೆ ನಡೆದಿದ್ರೆ ಅದು ಸರಿನಾ..?
  • ಪ್ರಶ್ನೆ 3 : ಆಗ ನಡೆದಿದ್ದ ಪ್ರಕರಣ ಆಗ್ಬಿಟ್ರೆ ಸುಮ್ಮನಿರಬೇಕಾ?
  • ಪ್ರಶ್ನೆ 4 : ಹಳೇ ಪ್ರಕರಣ ಅಂತ ನಿಮ್ಮ ಸಮರ್ಥನೆ ಎಷ್ಟು ಸರಿ?
  • ಪ್ರಶ್ನೆ 5 : ಪ್ರಕರಣದ ಮಾಹಿತಿ ಇದ್ರೂ ನೀವು ಸುಮ್ಮನಿದ್ದಿದ್ದು ಯಾಕೆ?
  • ಪ್ರಶ್ನೆ 6 : ಪ್ರಜ್ವಲ್ ರೇವಣ್ಣ ಮಾಡಿದ್ದು ನಿಮ್ಮ ಪ್ರಕಾರ ಸರಿಯೇ?
  • ಪ್ರಶ್ನೆ 7 : ಅಂದು ನನ್ನ ಮಗ ಅಂದ್ರಿ, ಈಗ ಉಲ್ಟಾ ಹೊಡೆದಿದ್ದೇಕೆ?
  • ಪ್ರಶ್ನೆ 8 : ಹೆಚ್​.ಡಿ. ರೇವಣ್ಣ ಕುಟುಂಬ ದೇವೇಗೌಡರ ಕುಟುಂಬ ಅಲ್ಲವೇ?
  • ಪ್ರಶ್ನೆ 9 : ಮೊದಲೇ ಗೊತ್ತಿದ್ರೆ ಹಾಸನದ ಟಿಕೆಟ್‌ ಯಾಕೆ ಕೊಟ್ರಿ..?
  • ಪ್ರಶ್ನೆ 10 : ಇಂತಹ ವ್ಯಕ್ತಿ ಸಂಸತ್‌ಗೆ ಹೋಗಲು ಯೋಗ್ಯನಾ?

RELATED ARTICLES

Related Articles

TRENDING ARTICLES