Tuesday, May 21, 2024

ಪ್ರಜ್ವಲ್ ರಾಸಲೀಲೆ : ಪ್ರಜ್ವಲ್ ರೇವಣ್ಣ, ಹೆಚ್.ಡಿ. ರೇವಣ್ಣಗೆ SIT ನೋಟಿಸ್

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗ ಇಬ್ಬರಿಗೂ ಭಾರಿ ಸಂಕಷ್ಟ ಎದುರಾಗಿದೆ.

ವಿಶೇಷ ತನಿಖಾ ತಂಡ (SIT) ಈಗಾಗಲೇ ತನಿಖೆಯನ್ನು ತೀವ್ರ ಚುರುಕುಗೊಳಿಸಿದೆ. ಈ ಪ್ರಕರಣದ ಕುರಿತಾಗಿ ಎಸ್​ಐಟಿ ತಂಡ, ಪ್ರಜ್ವಲ್ ರೇವಣ್ಣ ಹಾಗೂ ತಂದೆ ಹೆಚ್​.ಡಿ. ರೇವಣ್ಣರಿಗೆ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ತಲುಪಿದ 24 ಗಂಟೆಯೊಳಗೆ ತನಿಖೆಗೆ ಹಾಜರಾಗುವಂತೆ ಎಸ್​ಐಟಿ ಇಬ್ಬರಿಗೂ ಸೂಚಿಸಿದೆ. CRPC 41(A) ಅಡಿಯಲ್ಲಿ ಎಸ್​ಐಟಿ ತಂಡ ನೋಟಿಸ್ ಕೊಟ್ಟಿದೆ.

ಸಂಸದ ಪ್ರಜ್ವಲ್​ ರೇವಣ್ಣ ಕಾಮ ಪುರಾಣ ಬಗೆದಷ್ಟು ಬಯಲಾಗ್ತಿದೆ. ಸಂತ್ರಸ್ತೆಯರು ಕೊಟ್ಟ ದೂರಿನ ಆಧಾರದ ಮೇಲೆ ಈಗಾಗಲೇ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ತಂದೆ ಹೆಚ್​.ಡಿ. ರೇವಣ್ಣ ಎ1 ಆರೋಪಿ ಆಗಿದ್ರೆ, ಪುತ್ರ ಪ್ರಜ್ವಲ್​ ಎ2 ಆರೋಪಿ ಆಗಿದ್ದಾರೆ.

ಇಟ್ರೆಂಸ್ಟಿಂಗ್​ ವಿಚಾರವೆಂದ್ರೆ, ದೂರುದಾರೆ ಭವಾನಿ ರೇವಣ್ಣ ಸೋದರತ್ತೆ ಮಗಳು. ತಂದೆ ಮಗ ಇಬ್ಬರ ವಿರುದ್ಧವೂ ಮನೆ ಕೆಲಸದಾಕೆ ದೂರು ದಾಖಲಿಸಿದ್ದಾರೆ. ಅದೇ ದೂರು ಆಧರಿಸಿ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಈ ಮೂಲಕ ಅಪ್ಪ-ಮಗ ಇಬ್ಬರ ವಿರುದ್ಧವೂ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಎಫ್​ಐಆರ್​ ದಾಖಲಾಗಿದೆ.

RELATED ARTICLES

Related Articles

TRENDING ARTICLES