Monday, May 6, 2024

ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಬಯಕೆ ಇದೆ: ರೋಹಿತ್ ಶರ್ಮ

ಮುಂಬೈ : ನಾನು ಉತ್ತಮವಾಗಿ ಕ್ರಿಕೆಟ್ ಆಡುತ್ತಿದ್ದೇನೆ. ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇನೆ. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವುದು ನನ್ನ ಬಯಕೆಯಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕನ ಸ್ಥಾನ ಕಳೆದುಕೊಂಡ ಬಳಿಕ ರೋಹಿತ್ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗಳಿಗೆ ಈ ಮೂಲಕ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಬದೋನಿ ಏಕಾಂಗಿ ಹೋರಾಟ : ಡೆಲ್ಲಿಗೆ 168 ರನ್ ಟಾರ್ಗೆಟ್ ನೀಡಿದ ಲಕ್ನೋ

ನಾನು ನಿಜವಾಗಿಯೂ ನಿವೃತ್ತಿಯ ಬಗ್ಗೆ ಯೋಚನೆ ಮಾಡಿಲ್ಲ. ಪ್ರಸ್ತುತ ನಾನು ಉತ್ತಮ ಕ್ರಿಕೆಟ್ ಆಡುತ್ತಿದ್ದೇನೆ. ಹೀಗಾಗಿ ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡುತ್ತೇನೆ. ಆ ಬಳಿಕ ಏನೆಂಬುದು ಗೊತ್ತಿಲ್ಲ. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಬಯಕೆ ನನಗಿದೆ. 2025ರಲ್ಲಿ ಟೆಸ್ಟ್ ವಿಶ್ವಚಾಂಪಿಯನ್‌ಶಿಪ್ ಸಹ ಬರುತ್ತಿದೆ. ಭಾರತ ಇದನ್ನು ಗೆಲ್ಲಲಿದೆ ಎಂದು ರೋಹಿತ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES