Sunday, May 19, 2024

SRHಗೆ MI ಸವಾಲ್ : ತವರು ಅಂಗಳದಲ್ಲಿ ಇಂದಾದರೂ ಮುಂಬೈ ಇಂಡಿಯನ್ಸ್ ಗೆಲ್ಲುತ್ತಾ?

ಬೆಂಗಳೂರು : ಐಪಿಎಲ್​ನಲ್ಲಿ ಇಂದು ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ 55ನೇ ಪಂದ್ಯ ನಡೆಯಲಿದೆ. ಈ ಆವೃತ್ತಿಯಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ಉಡೀಸ್ ಮಾಡಿರುವ ಹೈದರಾಬಾದ್ ಇಂದು ರನ್​ ಮಳೆ ಹರಿಸುವ ಸಾಧ್ಯತೆಯಿದೆ.

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಕ್ಲಾಸೆನ್, ನಿತೀಶ್ ಅದ್ಭುತ ಫಾರ್ಮ್​ನಲ್ಲಿರುವುದು ಹೈದರಾಬಾದ್​ಗೆ ಪ್ಲಸ್ ಪಾಯಿಂಟ್. ಮತ್ತೊಂದೆಡೆ ಮುಂಬೈ ಸತತ ಸೋಲು ಕಂಡಿದೆ. ಆದರೂ, ತಂವರು ಅಂಗಳದಲ್ಲಿ ಹಾರ್ದಿಕ್ ಪಡೆಯನ್ನು ಮಣಿಸುವುದು ಅಷ್ಟು ಸಲಭವಲ್ಲ.

ಪ್ರಸಕ್ತ ಟೂರ್ನಿಯಲ್ಲಿ ಮುಂಬೈ 11 ಪಂದ್ಯಗಳನ್ನು ಆಡಿದೆ. ಈ ಪೈಕಿ 3 ಪಂದ್ಯಗಳನ್ನು ಗೆದ್ದಿದ್ದು, 8 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದೆ. ಹೈದರಾಬಾದ್ 10 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳಲ್ಲಿ ಗೆಲುವು ಹಾಗೂ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಮುಂಬೈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್ 4ನೇ ಸ್ಥಾನದಲ್ಲಿದೆ.

MI vs SRH ಬಲಾಬಲ

  • ಒಟ್ಟು ಪಂದ್ಯ : 22
  • ಮುಂಬೈ ಇಂಡಿಯನ್ಸ್ : 12 ಗೆಲುವು
  • ಸನ್‌ರೈಸರ್ಸ್ ಹೈದರಾಬಾದ್ :10 ಗೆಲುವು

ರಾಜೀವ್ ಗಾಂಧಿ ಸ್ಟೇಡಿಯಂ (ಹೈದ್ರಾಬಾದ್ )

  • ಒಟ್ಟು ಪಂದ್ಯ : 9
  • ಮುಂಬೈ ಇಂಡಿಯನ್ಸ್ : 4 ಗೆಲುವು
  • ಸನ್‌ರೈಸರ್ಸ್ ಹೈದರಾಬಾದ್ : 5 ಗೆಲುವು

ವಾಂಖೆಡೆ ಸ್ಟೇಡಿಯಂ (ಮುಂಬೈ )

  • ಒಟ್ಟು ಪಂದ್ಯ : 7
  • ಮುಂಬೈ ಇಂಡಿಯನ್ಸ್ : 5 ಗೆಲುವು
  • ಸನ್‌ರೈಸರ್ಸ್ ಹೈದರಾಬಾದ್ : 2 ಗೆಲುವು

ಮುಂಬೈ ಇಂಡಿಯನ್ಸ್​

ಇಶಾನ್ ಕಿಶನ್ (ವಿ.ಕೀ.), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ

ಸನ್‌ರೈಸರ್ಸ್ ಹೈದರಾಬಾದ್

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನ್ಮೋಲ್ಪ್ರೀತ್ ಸಿಂಗ್, ಹೆನ್ರಿಚ್ ಕ್ಲಾಸೆನ್ (ವಿ.ಕೀ.), ನಿತೀಶ್ ರೆಡ್ಡಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ. ನಟರಾಜನ್

RELATED ARTICLES

Related Articles

TRENDING ARTICLES