Sunday, May 19, 2024

ಜಾತಿ ಆಧಾರಿತ ಮೀಸಲಾತಿ ಮಿತಿಯನ್ನು ಕಿತ್ತು ಹಾಕುತ್ತೇವೆ : ರಾಹುಲ್ ಗಾಂಧಿ ಘೋಷಣೆ

ಮಧ್ಯ ಪ್ರದೇಶ : ಕಾಂಗ್ರೆಸ್​ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಜಾತಿ ಆಧಾರಿತ ಮೀಸಲಾತಿಗೆ ಇರುವ ಶೇ. 50ರಷ್ಟು ಮಿತಿಯನ್ನು ಕಿತ್ತು ಹಾಕುತ್ತೇವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮಧ್ಯ ಪ್ರದೇಶದ ರತ್ಲಂನಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್ ಗಾಂಧಿ, ದಲಿತರು, ಹಿಂದುಳಿದವರು ಹಾಗೂ ಆದಿವಾಸಿಗಳಿಗೆ (ಬುಡಕಟ್ಟು ಸಮುದಾಯಗಳ) ಅಗತ್ಯ ಇರುವಷ್ಟು ಮೀಸಲಾತಿಯನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಈ ಚುನಾವಣೆಯು ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಬಿಜೆಪಿ ಮತ್ತು RSS ಸಂವಿಧಾನವನ್ನು ಮುಗಿಸಲು, ಬದಲಿಸಲು ಬಯಸಿವೆ. ಕಾಂಗ್ರೆಸ್ ಮತ್ತು ಐಎನ್‌ಡಿಐಎ ಒಕ್ಕೂಟವು ಇದನ್ನು ಉಳಿಸಲು ಪ್ರಯತ್ನಿಸುತ್ತಿವೆ. ಈ ಸಂವಿಧಾನವು ನಿಮಗೆ ನೀರು, ಕಾಡು ಮತ್ತು ಭೂಮಿಯ ಮೇಲೆ ಹಕ್ಕುಗಳನ್ನು ನೀಡಿದೆ. ನರೇಂದ್ರ ಮೋದಿ ಅವುಗಳನ್ನು ತೆಗೆದು ಹಾಕಲು ಬಯಸಿದ್ದಾರೆ. ಅವರು ಪೂರ್ಣ ಅಧಿಕಾರ ಬಯಸಿದ್ದಾರೆ ಆರೋಪಿಸಿದ್ದಾರೆ.

ನಿಮ್ಮ ಹಕ್ಕುಗಳನ್ನು ಕಸಿಯುವ ಗುರಿ

ಪ್ರಧಾನಿ ಮೋದಿಗೆ ಆಡಳಿತ ನಡೆಸುವ ಹಪಾಹಪಿ ಇದ್ದು, ಸಂವಿಧಾನವನ್ನು ಪಕ್ಕಕ್ಕೆ ಸರಿಸುವ ಆಲೋಚನೆ ಹೊಂದಿದ್ದಾರೆ. ನಿಮ್ಮ ಹಕ್ಕುಗಳನ್ನು ಕಸಿಯುವ ಗುರಿ ಮೋದಿಗಿದ್ದು, ಅದನ್ನು ನಾವು ತಡೆಯುತ್ತೇವೆ. ಆದಿವಾಸಿಗಳು ಹಾಗೂ ಹಿಂದುಳಿದವರಿಗೆ ಸಂವಿಧಾನದಿಂದಲೇ ಹಕ್ಕು ಸಿಕ್ಕಿದೆ. ಮತ್ತೆ ಅಧಿಕಾರಕ್ಕೆ ಬಂದು ಸಂವಿಧಾನ ತಿದ್ದುಪಡಿ ಮಾಡಲೆಂದೇ ಬಿಜೆಪಿಯವರು 400ಕ್ಕೂ ಹೆಚ್ಚು ಸ್ಥಾನ ಅಂತ ಘೋಷಣೆ ಕೂಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES