Monday, May 6, 2024

ಬದೋನಿ ಏಕಾಂಗಿ ಹೋರಾಟ : ಡೆಲ್ಲಿಗೆ 168 ರನ್ ಟಾರ್ಗೆಟ್ ನೀಡಿದ ಲಕ್ನೋ

ಬೆಂಗಳೂರು : ಆಯುಷ್ ಬದೋನಿ ಏಕಾಂಗಿ ಹೋರಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಲಕ್ನೋದ ಏಕನಾ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೋ ಸೂಪರ್‌ ಜೈಂಟ್ಸ್‌ ಮೊದಲು ಬ್ಯಾಟಿಂಗ್ ಮಾಡಿದರು. ಆದರೆ, ನಾಯಕ ಕೆ.ಎಲ್. ರಾಹುಲ್ ಲೆಕ್ಕಾಚಾರವನ್ನು ಡೆಲ್ಲಿ ಬೌಲರ್​​ಗಳು ಉಲ್ಟಾ ಮಾಡಿದರು.

ಇನ್ನಿಂಗ್ಸ್​ ಆರಂಭಿಸಿದ ಲಕ್ನೋ ಉತ್ತಮ ಆರಂಭ ಪಡೆಯಲಿಲ್ಲ. ಕೆ.ಎಲ್. ರಾಹುಲ್ ಜೊತೆ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ 19 ರನ್​ ಗಳಿಸಿ ಔಟಾದರು. ಬಳಿಕ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ 3 ರನ್​ಗೆ ಆಟ ಮುಗಿಸಿದರು. ಲಕ್ನೋ ನಂಬಿಕಸ್ತ ಬ್ಯಾಟರ್ ಮಾರ್ಕಸ್ ಸ್ಟೋನಿಸ್ 8 ರನ್​ ಗಳಿಸಿ ಔಟಾದರು.

ಲಕ್ನೋ ಬಿಗ್ ಹಿಟ್ಟರ್ ನಿಕೋಲಸ್ ಪೂರನ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ರಾಹುಲ್ ಚೇತರಿಕೆ ನೀಡಿದರು. ದೀಪಕ್ ಹೂಡಾ ಸಹ 10 ರನ್​ಗೆ ಸುಸ್ತಾದರು. ಬಳಿಕ ರಾಹುಲ್​ ಜೊತೆ ಒಂದಾದ ಆಯುಷ್ ಬದೋನಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಈ ವೇಳೆಗೆ ರಾಹುಲ್ 39 ರನ್​ಗೆ ಆಟ ಮುಗಿಸಿದರು.

ಆಯುಷ್ ಬದೋನಿ ಅಬ್ಬರ

ಕೃನಾಲ್ ಪಾಂಡ್ಯ 3 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಬದೋನಿ ಏಕಾಂಗಿ ಹೋರಾಟ ನಡೆಸಿದರು. ಅರ್ಷದ್ ಖಾನ್ ಹಾಗೂ ಬದೋನಿ ಅರ್ಧಶತಕದ ಜೊತೆಯಾಟ ಲಕ್ನೋಗೆ ಆಸೆಯಾಯಿತು. ಅಂತಿಮವಾಗಿ 20 ಓವರ್​ಗಳಲ್ಲಿ ಲಕ್ನೋ 7 ವಿಕೆಟ್ ಕಳೆದುಕೊಂಡು 167 ರನ್​ ಗಳಿಸಿತು. ಆಯುಷ್ ಬದೋನಿ ಅಜೇಯ 55 ಹಾಗೂ ಅರ್ಷದ್ ಖಾನ್ ಅಜೇಯ 20 ರನ್​ ಸಿಡಿಸಿದರು. ಡೆಲ್ಲಿ ಪರ ಕುಲ್​ದೀಪ್ ಯಾದವ್ 3, ಖಲೀಲ್ ಅಹಮ್ಮದ್ 2, ಇಶಾಂತ್ ಶರ್ಮಾ ಹಾಗೂ ಮುಖೇಶ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES