Sunday, May 19, 2024

ಬೀದರ್​ನಲ್ಲಿ ಜಾನುವಾರುಗಳ ನೀರಿನ ದಾಹ ತಣಿಸುತ್ತಿರುವ ‘ಸ್ನೇಹಿತರು’

ಬೀದರ್ : ಬಿರು ಬಿಸಿಲಿನ ಬೇಗೆಗೆ ಜನರೇ ತತ್ತರಿಸಿ ಹೋಗುತ್ತಿದ್ದು, ಜಾನುವಾರುಗಳ ಮೂಕ ರೋಧನೆ ಹೇಳತೀರದ್ದಾಗಿದೆ. ಬಿಡಾಡಿ ದನಗಳ ನೀರಿನ ದಾಹ ತಣಿಸಲು ಬೀದರ್‌ನಲ್ಲಿ ಕೆಲ ಸ್ನೇಹಿತರು ಒಂದಾಗಿದ್ದಾರೆ.

ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ನೀರಿನ ದಾಹ ತಣಿಸುವ ಕೆಲಸ ಮಾಡ್ತಾ ಇದ್ದಾರೆ. ನಗರದ ಬಸ್ ಸ್ಟ್ಯಾಂಡ್, ಕೆಇಬಿ ಮುಂದೆ, ಶ್ರೀ ಮಾರ್ಕೆಟಿಂಗ್, ರಾಘವೇಂದ್ರ ಮಂದಿರ, ಗಣೇಶ ಮಂದಿರ ಹಾಗೂ ಗಾಂಧಿ ಗಂಜ್ ಸೇರಿದಂತೆ ಹಲವೆಡೆ ಟ್ರಸ್ಟ್ ಮೂಲಕ 2೦೦ ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿ ಅಳವಡಿಸಿ, ನೀರನ್ನು ತುಂಬಿಸುವ ಕೆಲಸ ಮಾಡ್ತಾ ಇದ್ದಾರೆ.

ದನ ಕರುಗಳು ನೀರು ಕುಡಿದು ತೊಟ್ಟಿಗಳು ಖಾಲಿಯಾದ ಬಳಿಕ ಪುನಃ ನೀರು ತುಂಬಿಸುವ ಯೋಜನೆಯನ್ನ ಮಾಡಿಕೊಂಡಿದ್ದಾರೆ. ತೊಟ್ಟಿ ಸಮೀಪ ಇರುವವರಿಗೆ ನೀರುಣಿಸುವ ಜವಾಬ್ದಾರಿ ವಹಿಸಿದ್ದು, ಅವರು ನೀರು ತುಂಬಿಸುವ ಕೆಲಸ ಮಾಡ್ತಾ ಇದ್ದಾರೆ.

ಸ್ನೇಹಿತರ ಕಾರ್ಯಕ್ಕೆ ನಗರದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಕೆಲಸಗಳನ್ನ ಪ್ರತಿಯೊಬ್ಬರೂ ಮಾಡಿ, ಜಾನುವಾರುಗಳ ನೀರಿನ ದಾಹ ತಣಿಸುವ ಕೆಲಸ ಮಾಡಲಿ ಎಂಬುದಯ ಪರಿಸರ ಪ್ರೇಮಿಗಳ ಆಶಯವಾಗಿದೆ.

RELATED ARTICLES

Related Articles

TRENDING ARTICLES