Friday, May 10, 2024

ನರೈನ್, ರಸೆಲ್, ರಿಂಕು ರೌದ್ರಾವತಾರ : ಇತಿಹಾಸ ಸೃಷ್ಟಿಸಿದ ಕೆಕೆಆರ್, RCB ದಾಖಲೆ ಧೂಳಿಪಟ

ಬೆಂಗಳೂರು : ನರೈನ್ ನಟೋರಿಯಸ್ ಬ್ಯಾಟಿಂಗ್. ಆಂಡ್ರೆ ರಸೆಲ್ ರೌದ್ರಾವತಾರ. ರಾಕ್ ಸ್ಟಾರ್ ರಿಂಕು ಸಿಂಗ್ ಆರ್ಭಟ. ವಿಶಾಖಪಟ್ಟಣದಲ್ಲಿ ಸಿಕ್ಸರ್​ಗಳ ಸುರಿಮಳೆ. ಐಪಿಎಲ್​ನಲ್ಲಿ ಇತಿಹಾಸ ಸೃಷ್ಟಿ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ದಾಖಲೆಯ ಮೊತ್ತ ಪೇರಿಸಿತು. ಈ ಮೂಲಕ ಆರ್​ಸಿಬಿ ದಾಖಲೆಯನ್ನು ಧೂಳಿಪಟ ಮಾಡಿತು.

ಇನ್ನಿಂಗ್ಸ್​ ಆರಂಭಿಸಿದ ಕೆಕೆಆರ್ ಬ್ಯಾಟರ್​ಗಳು ಡೆಲ್ಲಿ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಸುನಿಲ್ ನರೈನ್ ಕೆಕೆಆರ್​ ಬೌಲರ್​ಗಳಿಗೆ ನರಕ ತೋರಿಸಿದರು. 39 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 7 ಬೌಂಡರಿಗಳ ನೆರವಿನೊಂದಿಗೆ 85 ರನ್​ ಚಚ್ಚಿದರು.

ರಸೆಲ್ ರೌದ್ರಾವತಾರ

ರಘುವಂಶಿ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದರು. 27 ಎಸೆತಗಳಲ್ಲಿ 45 ಸಿಕ್ಸ್ ಹಾಗೂ 3 ಬೌಂಡರಿಗಳೊಂದಿಗೆ ಭರ್ಜರಿ (54) ಅರ್ಧಶತಕ ಸಿಡಿಸಿದರು. ಬಳಿಕ ಬಂದ ಆಂಡ್ರೆ ರಸೆಲ್ ಕ್ರೀಡಾಂಗಣದ ಮೂಲೆ ಮೂಲೆಗೂ ಚಂಡಿನ ದರ್ಶನ ಮಾಡಿಸಿದರು. ಕೇವಲ 19 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಬೌಂಡರಿಗಳೊಂದಿಗೆ 41 ರನ್ ಸಿಡಿಸಿದರು.

ರಾಕ್ ಸ್ಟಾರ್ ರಿಂಕು ಸಿಂಗ್ ಅಬ್ಬರ

ರಾಕ್ ಸ್ಟಾರ್ ರಿಂಕು ಸಿಂಗ್ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 26 ರನ್​ ಚಚ್ಚಿದರು. ನಾಯಕ ಶ್ರೇಯಸ್​ ಅಯ್ಯರ್ ಹಾಗೂ ಫಿಲಿಪ್ ಸಾಲ್ಟ್ 18 ರನ್​ ಗಳಿಸಿದರು. ನಿಗದಿತ 20 ಓವರ್​ಗಳಲ್ಲಿ ಕೆಕೆಆರ್ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 272 ರನ್​ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಅನ್ರಿಚ್ 3, ಇಶಾಂತ್ ಶರ್ಮಾ 2, ಖಲೀಲ್ ಅಹ್ಮದ್ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES