Monday, May 6, 2024

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಬ್ರುನೋ (ಶ್ವಾನ) ನಿಧನ

ಬೀದರ್ : ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 10 ವರ್ಷ 6 ತಿಂಗಳುಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಬ್ರುನೋ (ಶ್ವಾನ) ಇಂದು ವಯೋ ಸಹಜ ಖಾಯಿಲೆಯಿಂದ ಮೃತಪಟ್ಟಿದೆ.

ಹಲವಾರು ಪ್ರಕರಣಗಳಲ್ಲಿ ಬೀದರ್ ಪೊಲೀಸ್ ಇಲಾಖೆಗೆ ಸಹಾಯ ಮಾಡಿದ್ದ ಲ್ಯಾಬ್ರಡರ್ ತಳಿಯ ಬ್ರೂನೊ (ಶ್ವಾನ) ಇಂದು ಅನಾರೋಗ್ಯದಿಂದ ಮೃತಪಟ್ಟಿದೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ವಂದನೆ ಸಲ್ಲಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಶವ ಸಂಸ್ಕಾರ ನಡೆಸಲಾಯ್ತು.

ಇದನ್ನೂ ಓದಿ: Dharwad Loksabha Election Survey 2024 : ಜೋಶಿಗೆ ಸದ್ಯಕ್ಕೆ ಧಾರವಾಡ ಪೇಡ ಫಿಕ್ಸ್?

ಪೊಲೀಸ್ ಇಲಾಖೆಯಲ್ಲಿ ಕಳೆದ 10 ವರ್ಷ 6 ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಬ್ರುನೋ ಅನೇಕ ಪ್ರಕರಣಗಳನ್ನ ಬೇಧಿಸುವಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡಿತ್ತು. ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳಿಗೂ ತೆರಳಿ, ವಿಐಪಿ ಹಾಗೂ ವಿವಿಐಪಿಗಳು ಭೇಟಿ ನೀಡುವ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ಮಾಡಿತ್ತು. ಪ್ರಧಾನಮಂತ್ರಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಬೇಟಿ ನೀಡುವ ಸ್ಥಳಗಳ ಪರಿಶೀಲನೆ ನಡೆಸುವ ಕೆಲಸವನ್ನ ಇಲಾಖೆ ಸಿಬ್ಬಂದಿ ‌ಜೊತೆಗೆ ಬ್ರುನೋ ಮಾಡಿತ್ತು. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಇತ್ತಿಚೀಗೆ ನಡೆದ ಮಹಿಳೆಯ ಕೊಲೆ ಪ್ರಕರಣವನ್ನ ಬೇದಿಸುವಲ್ಲಿ ಮಹತ್ವದ ಸುಳಿವನ್ನ ಬ್ರುನೋ ಪತ್ತೆ ಹಚ್ಚುವ ಮೂಲಕ ಮಹತ್ವದ ಪಾತ್ರ ವಹಿಸಿತ್ತು.

ಬ್ರುನೋಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗು ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಬ್ರುನೋ ಸೇವೆಯನ್ನ ಶ್ಲಾಘಿಸಿದರು. ಪ್ರಕರಣಗಳನ್ನು ಬೇದಿಸುವ ಸಮಯದಲ್ಲಿ ಅತಿ ಚುರುಕಾಗಿ ಕೆಲಸ ಮಾಡುತ್ತಿದ್ದ ಬ್ರುನೋ ನಿಧನವಾಗಿದ್ದು ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅನೇಕ‌ ಪ್ರಕರಣಗಳನ್ನ ಬೇಧಿಸಿ ಹಲವು ಪ್ರಶಸ್ತಿಗಳನ್ನ ಬ್ರುನೊ ತನ್ನದಾಗಿಸಿಕೊಂಡಿತ್ತು ಎಂದು ಬ್ರುನೊ ಮೇಲ್ವಿಚಾರಕ ಅಶೋಕ ಕಂಬನಿ‌ ಮಿಡಿದಿದ್ದಾರೆ.

RELATED ARTICLES

Related Articles

TRENDING ARTICLES