Sunday, May 19, 2024

T20 World Cup ಗೆ ಉಗ್ರರ ಬೆದರಿಕೆ

ಕ್ರಿಕೆಟ್​ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ T20 Cricket WorldCup ಜೂನ್​ 1 ರಿಂದ ಆರಂಭವಾಗಲಿದ್ದು ಇದೀಗ ಈ ಪಂದ್ಯಾವಳಿಗಳ ಮೇಲೆ ಉಗ್ರರ ಕರಿನೆರಳು ಬಿದ್ದಿದೆ.

ವೆಸ್ಟ್​ ಇಂಡೀಸ್​ ಮತ್ತು ಅಮೇರಿಕಾ ಆತಿಥ್ಯದಲ್ಲಿ ಜೂನ್​1 ರಿಂದ ಪಂದ್ಯಾವಳಿಗಳು ಆರಂಭವಾಗಲಿದ್ದು ಈ ನಡುವೆ ಪಂದ್ಯಾವಳಿಗಳ ಮೇಲೆ ಉತ್ತರ ಪಾಕೀಸ್ತಾನದಿಂದ ಬೆದರಿಕೆ ಬಂದಿದೆ ಎಂದು ಕ್ರಿಕೆಟ್​ ವೆಸ್ಟ್​ ಇಂಡೀಸ್​ ಸಿಇಒ ಜಾನಿ ಗ್ರೇವ್ಸ್​ ಅವರು ಮಾಹಿತಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ಸ್, ನಾವು ಆತಿಥೇಯ ದೇಶಗಳು ಮತ್ತು ನಗರಗಳಲ್ಲಿನ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದೇವೆ. ನಮ್ಮ ಕಾರ್ಯಕ್ರಮಕ್ಕೆ ಗುರುತಿಸಲಾದ ಅಪಾಯಗಳನ್ನು ತಗ್ಗಿಸಲು ಸೂಕ್ತವಾದ ಯೋಜನೆಗಳು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಗ್ರಾಮೀಣಾಭಿವೃದ್ದಿ ಸಚಿವರ ಆಪ್ತನ ಮನೆ ಮೇಲೆ ED ದಾಳಿ: 20 ಕೋಟಿಗೂ ಅಧಿಕ ಹಣ ವಶಕ್ಕೆ

ಮೂಲಗಳ ಪ್ರಕಾರ (IS) Islamic States, ಪ್ರೋ ಇಸ್ಲಾಮಿಕ್​ ಸ್ಟೇಟ್​ ಮಾದ್ಯಮಗಳು ಟಿ20 ವಿಶ್ವಕಪ್​ ಕ್ರೀಡೆ  ವಿರುದ್ದ ಹಿಂಸಾಚಾರ ಪ್ರಚೋದಿತ ಅಭಿಯಾನವನ್ನು ಆರಂಭಿಸಿದೆ. ಇದರಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ಶಾಖೆಯ ವೀಡಿಯೊ ಸಂದೇಶಗಳು ಸೇರಿವೆ. ಇದು ಹಲವಾರು ದೇಶಗಳಲ್ಲಿ ನಡೆದ ದಾಳಿಗಳನ್ನು ಎತ್ತಿ ತೋರಿಸಿವೆ. ಅಲ್ಲದೇ ಬೆಂಬಲಿಗರನ್ನು ಅವರ ದೇಶಗಳಲ್ಲಿ ಯುದ್ಧಭೂಮಿಗೆ ಸೇರುವಂತೆ ಒತ್ತಾಯಿಸಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.

T20 worldCup ಪಂದ್ಯಗಳು ನಡೆಯಲಿರುವ ಸ್ಥಳಗಳ ವಿವರ:

ಜೂನ್ 1 ರಿಂದ ಜೂನ್​ 29 ರ ವರೆಗೆ ಟಿ20 ವಿಶ್ವಕಪ್​ ಪಂದ್ಯಾವಳಿಗಳು ನಡೆಯಲಿದ್ದು ವೆಸ್ಟ್ ಇಂಡೀಸ್ ನ ಆಂಟಿಗುವಾ, ಬಾರ್ಬುಡಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಾಗಿದೆ.

ಅಮೇರಿಕಾದ ನಗರಗಳಾದ ಫ್ಲೋರಿಡಾ, ನ್ಯೂಯಾರ್ಕ್ ಮತ್ತು ಟೆಕ್ಸಾಸ್‌ನಲ್ಲಿಯೂ ಪಂದ್ಯಗಳು ನಡೆಯಲಿದೆ, ಇಲ್ಲಿ ನಡೆಯಲಿರುವ ಪಂದ್ಯಗಳಿಗೆ ಯಾವುದೇ ಬೆದರಿಕೆಗಳು ಕೇಳಿಬಂದಿಲ್ಲ. ಎರಡು ಸೆಮಿಫೈನಲ್‌ ಪಂದ್ಯಗಳು ಟ್ರಿನಿಡಾಡ್ ಮತ್ತು ಗಯಾನಾದಲ್ಲಿ ನಡೆಯಲಿದ್ದು, ಅಂತಿಮ ಪಂದ್ಯವನ್ನು ಬಾರ್ಬಡೋಸ್‌ನಲ್ಲಿ ನಿಗದಿಪಡಿಸಲಾಗಿದೆ.

RELATED ARTICLES

Related Articles

TRENDING ARTICLES