Sunday, May 19, 2024

ನಮ್ಮ ಮೆಟ್ರೋದಲ್ಲಿ ಪ್ರೇಮಿಗಳ ಸರಸ: ಜನರಿಂದ ಭಾರಿ ಆಕ್ರೋಶ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದ ಪ್ರೇಮಿಗಳಿಬ್ಬರ ಪ್ರಣಯ ಪ್ರಸಂಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತ ವೀಡಿಯೋ KPSB 52 ಎಂಬ ಎಕ್ಸ್​ ಖಾತೆ ಮೂಲಕ ಪೋಸ್ಟ್​ ಮಾಡಲಾಗಿದ್ದು​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್​ನಲ್ಲಿ “ನಮ್ಮ ಮೆಟ್ರೋಗೆ ಏನಾಗಿದೆ, ನಿಧಾನವಾಗಿ ಬೆಂಗಳೂರು ಮೆಟ್ರೋ ದೆಹಲಿ ಮೆಟ್ರೋ ಆಗಿ ಬದಲಾಗುತ್ತಿದೆ. ಇವರ ವಿರುದ್ದ ಕ್ರಮ ಕೈಗೊಳ್ಳಿ” ಎಂದು ಬರೆಯಲಾಗಿದೆ.

ಇದನ್ನೂ ಓದಿ: ಇನ್ನು 5 ದಿನಗಳಲ್ಲಿ ರಾಜ್ಯಾದಂತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಈ ವೀಡಿಯೋದಲ್ಲಿ ಮೆಟ್ರೋ ಟ್ರೈನ್​ ನ ಬಾಗಿಲ ಬಳಿ ಪ್ರೇಮಿಗಳು ಮಿತಿ ಮೀರಿ ವರ್ತಿಸಿದ್ದಾರೆ. ಟ್ರೈನ್​ ಒಳಗೆ ಜನರು ಇರುವುದನ್ನೇ ಮರೆತು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಸದ್ಯ ಎಲ್ಲೆಡೆ ಹರಿದಾಡುತ್ತಿರುವ ಈ ವೀಡಿಯೋಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES