Friday, May 3, 2024

Dharwad Loksabha Election Survey 2024 : ಜೋಶಿಗೆ ಸದ್ಯಕ್ಕೆ ಧಾರವಾಡ ಪೇಡ ಫಿಕ್ಸ್?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ  ಮಧ್ಯಾಹ್ನ 1.30 ರಿಂದ ಸಂಜೆ 5.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ:

ಲೋಕಸಭಾ ಕ್ಷೇತ್ರ: ಧಾರವಾಡ

ಹಾಲಿ ಸಂಸದ: ಪ್ರಹ್ಲಾದ್ ಜೋಶಿ

————————————————————

2024ರಲ್ಲಿ ಬಿಜೆಪಿ ಅಭ್ಯರ್ಥಿ  : ಬಿಜೆಪಿ ; ಪ್ರಹ್ಲಾದ್ ಜೋಶಿ

2024ರಲ್ಲಿ ಕಾಂಗ್ರೆಸ್​ ಅಭ್ಯರ್ಥಿ : ಕಾಂಗ್ರೆಸ್ : ವಿನೋದ್​ ಅಸೂಟಿ

————————————————————-

2019ಬಲಾಬಲ

ಪ್ರಹ್ಲಾದ್ ಜೋಶಿ        : ಬಿಜೆಪಿ           :6,84,837 : ಶೇ. 56.43

ವಿನಯ್ ಕುಲಕರ್ಣಿ   : ಕಾಂಗ್ರೆಸ್       :4,79,765 : ಶೇ. 39.54

ಈರಪ್ಪ ಮಾದರ        : ಬಿಎಸ್​​ಪಿ       :6,344     :  ಶೇ. 00.52

ಚಲಾವಣೆಯಾದ ಒಟ್ಟು ಮತಗಳು   : 12,14,138 : ಶೇ. 70.29

ಪ್ರಹ್ಲಾದ್ ಜೋಶಿ  ಗೆಲುವಿನ ಅಂತರ            : 02,05,072 : ಶೇ. 16.89

ಮತದಾರರ ವಿವಿರ :

ಪುರುಷರು  :   9,05,745

ಮಹಿಳೆಯರು : 9,00,277

ಒಟ್ಟು ಮತದಾರರು  : 18,06,120

( ತೃತೀಯ ಲಿಂಗಿಗಳು 98)

=================================

ಜಾತಿವಾರು ಲೆಕ್ಕಾಚಾರ

ಲಿಂಗಾಯತ   : 5,70,000

ಮುಸ್ಲಿಂ        : 3,38,000

ಎಸ್ಸಿ/ಎಸ್ಟಿ    : 2,60,000

ಕುರುಬ         : 1,50,000

ಮರಾಠ        : 1,20,000

ಬ್ರಾಹ್ಮಣ      : 90,000

ಇತರೆ             : 2,45,000 ( ಕ್ರಿಶ್ಚಿಯನ್, ಜೈನ್,ಸಾವಜಿ ಸೇರಿ ಇತರೆ)

==========================

ಬಿಜೆಪಿ ಪ್ಲಸ್ :

ಕೇಂದ್ರ ಸಚಿವರಾಗಿ ಪ್ರಭಾವ.. ಮೋದಿ ಆಪ್ತ ಬಳಗದಲ್ಲಿ ಒಬ್ಬರು..

ಹುಬ್ಬಳ್ಳಿ, ಧಾರವಾಡ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿರುವುದು

ಐಐಟಿ, ಐಐಐಟಿ ಸ್ಥಾಪನೆ, ವಂದೇ ಭಾರತ್ ರೈಲು ಹಲವು ಅಭಿವೃದ್ಧಿ ಕಾರ್ಯ

ಪ್ರಧಾನಿ ನರೇಂದ್ರ ಮೋದಿ ಅಲೆ ಜೊತೆ ಹಿಂದೂತ್ವದ ವೋಟ್ ಬ್ಯಾಂಕ್

ಕ್ಷೇತ್ರದಲ್ಲಿ ಎಲ್ಲಾ ಸ್ಥಳೀಯ ನಾಯಕರ ಜೊತೆ ಉತ್ತಮ ಬಾಂಧವ್ಯ

==========================

ಬಿಜೆಪಿ ಮೈನಸ್  :

ಕಳೆದ ವಿಧಾನಸಭೆ ಎಲೆಕ್ಷನ್ ವೇಳೆ ಪಕ್ಷದಲ್ಲಿನ ಗೊಂದಲ

ಕಳಸಾ ಬಂಡೂರಿ ಯೋಜನೆ ಕಾರ್ಯಗತ ಆಗದೇ ಇರುವುದು

ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದು

=====================================

ಕಾಂಗ್ರೆಸ್ ಪ್ಲಸ್  :

ಯುವ ನಾಯಕ ವಿನೋದ್​ ಅಸೂಟಿ ಸವಾಲಾಗಿ ಸ್ವೀಕರಿಸಿದ್ದು

ಲಿಂಗಾಯತ ಯುವ ನಾಯಕನ ಮೂಲಕ ಪ್ರಭಾವಕ್ಕೆ ಸರ್ಕಸ್​

ಅಸೆಂಬ್ಲಿ ಎಲೆಕ್ಷನ್​​ನಲ್ಲಿ 4 ಕ್ಷೇತ್ರಗಳಲ್ಲಿನ ಜಯಭೇರಿ

ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿರುವ ವಿಶ್ವಾಸ

=========================

ಕಾಂಗ್ರೆಸ್ ಮೈನಸ್ :

ಗ್ಯಾರಂಟಿ ಜಾರಿ ನೆಪದಲ್ಲಿ ಅಭಿವೃದ್ಧಿ ಯೋಜನೆಗಳ ಕಡೆಗಣನೆ

ಕ್ಷೇತ್ರದಲ್ಲಿ ಪಕ್ಷದ ಮುಖಂಡರಲ್ಲೇ ಇರುವ ವೈಮನಸ್ಸು, ಕಿತ್ತಾಟ

ಯುವ ನಾಯಕನ ಬಗ್ಗೆ ಪಕ್ಷದ ಹಿರಿಯರಲ್ಲಿ ತಾತ್ಸಾರ ಮನೋಭಾವ

ಟಿಕೆಟ್​ ವಂಚಿತ ರಜತ್​ ಉಳ್ಳಾಗಡ್ಡಿಮಠ ಒಳೇಟು ಕೊಡುವ ಆತಂಕ

ಧಾರವಾಡ ಕ್ಷೇತ್ರದಿಂದ ಮತದಾರರಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಸಖತ್​ ಪ್ರತಿಕ್ರಿಯೆ ಸಿಕ್ಕಿದ್ದು ಧಾರವಾಡ ಕ್ಷೇತ್ರದಿಂದ ಯಾರಿಗೆ ಹೆಚ್ಚು ಮತ ಹಾಕಿದ್ದಾರೆ? ಕೇಸರಿ ಕಲಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​? ಪ್ರಹ್ಲಾದ್​ ಜೋಶಿಗೆ ಪೇಡಾನಾ? ವಿನೋದ್​ ಅಸೂಟಿ​ ಪೇಡಾನಾ? ಇವೆಲ್ಲದಕ್ಕು ಉತ್ತರ ಇಲ್ಲಿದೆ.

ಪವರ್ ಟಿವಿ ಸರ್ವೆಯ ರಿಸಲ್ಟ್​:

ಧಾರವಾಡ ಲೋಕಸಭಾ ಕ್ಷೇತ್ರದಿಂದ ಒಟ್ಟು ಕರೆಗಳು – 6,997
ಪುರುಷ ಮತದಾರರಿಂದ 6457. ಮಹಿಳಾ ಮತದಾರರಿಂದ 540 ಕರೆಗಳು
ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 4061. ಕಾಂಗ್ರೆಸ್​ ಅಭ್ಯರ್ಥಿಗೆ ವೋಟ್ಸ್​ – 2936
ಧಾರವಾಡ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0
ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 58%
ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 42%
ಇತರರಿಗೆ ಬಂದ ಶೇಕಡಾವಾರು ಮತಗಳು – 0
ಕಾಂಗ್ರೆಸ್ ವಿರುದ್ಧ ಬಿಜೆಪಿಗೆ 1,125 ಮತಗಳ ಭರ್ಜರಿ ಮುನ್ನಡೆ

ಧಾರವಾಡ ಕ್ಷೇತ್ರದ ಸದ್ಯದ ಟ್ರೆಂಡ್​:

ಧಾರವಾಡ ಅಖಾಡದಲ್ಲಿ ಸದ್ಯಕ್ಕೆ ಪ್ರಹ್ಲಾದ್​ ಜೋಶಿಗೆ ಪೇಢಾ ಫಿಕ್ಸ್​
ಧಾರವಾಡದಲ್ಲಿ ಬಿಜೆಪಿಗೆ ಟಕ್ಕರ್​ ಕೊಡಲು ಕಾಂಗ್ರೆಸ್ ರಣತಂತ್ರ ಸಾಕಾಗ್ತಿಲ್ಲ
ಪ್ರಹ್ಲಾದ್​ ಜೋಶಿ ಅನುಭವದ ಮುಂದೆ ಅಸೂಟಿ​ ಆಟ ಇನ್ನೂ ಪ್ರಭಾವ ಬೀರಿಲ್ಲ
ಧಾರವಾಡದಲ್ಲಿ ಸದ್ಯದ ಲೆಕ್ಕಾಚಾರದಂತೆ ಪ್ರಹ್ಲಾದ್​ ಜೋಶಿ ಜಯಭೇರಿ ​
ಇದು ಪವರ್ ಟಿವಿ ಸರ್ವೆ ಮೂಲಕ ಧಾರವಾಡ ಮತದಾರರ ಸಂದೇಶ.

RELATED ARTICLES

Related Articles

TRENDING ARTICLES