Friday, May 17, 2024

ನಮಾಜ್ ವೇಳೆ ಹೃದಯಾಘಾತ : ಪ್ರಾರ್ಥನೆ ಸಲ್ಲಿಸುವಾಗ ಹಾರಿಹೋಯ್ತು ಪ್ರಾಣ

ಉತ್ತರ ಪ್ರದೇಶ : ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಅಕ್ಕನ ಮದುವೆ ಸಂಭ್ರಮದಲ್ಲಿದ್ದ ಡ್ಯಾನ್ಸ್​ ಮಾಡುತ್ತಿದ್ದ 18 ವರ್ಷದ ಹುಡುಗಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಳು. ಇದೀಗ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ.

ಮಸೀದಿಯಲ್ಲಿ ನಮಾಜ್​ ಮಾಡುವ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತ ಸಂಭವಿಸಿ, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಸಂಭವಿಸಿದೆ.

ಮುರಾದ್​ ನಗರದ ಮಸೀದಿಯಲ್ಲಿ ವೃದ್ಧರೊಬ್ಬರು ನಮಾಜ್ ಮಾಡುತ್ತಿದ್ದರು. ಅಲ್ಲಾಹುವಿಗೆ ಪ್ರಾರ್ಥನೆ ಸಲಿಸುವಾಗ ದಿಢೀರ್ ಹೃದಯಾಘಾತವಾಗಿದೆ. ಆಗ ವ್ಯಕ್ತಿ ಕುಳಿತು ನಮಾಜ್​ ಮಾಡುವವ ವೇಳೆ ಹಿಮ್ಮುಖವಾಗಿ ಬೀಳುತ್ತಾರೆ.

ವೃದ್ಧನಿಗೆ ಹೃದಯಾಘಾತವಾಗುವ ದೃಶ್ಯ ಕಂಡು ಮಸೀದಿಯಲ್ಲಿದ್ದವರು ಅವರ ಸಹಾಯಕ್ಕೆ ಆಗಮಿಸಿದ್ದಾರೆ. ದುರಾದೃಷ್ಟವಶಾತ್ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಆಘಾತಕಾರಿ ದೃಶ್ಯ ಮಸೀದಿ ಒಳಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ಹರಿದಾಡುತ್ತಿದೆ.

RELATED ARTICLES

Related Articles

TRENDING ARTICLES