Thursday, June 13, 2024

ಜೈಲಿನಿಂದ ಬಂದ್ರೂ ರೇವಣ್ಣ ಭೇಟಿಯಾಗದ ಪತ್ನಿ : ಕುಟುಂಬಸ್ಥರಿಂದ ಭವಾನಿ ದೂರ ದೂರ!

ಹಾಸನ : ಮಹಿಳೆ ಅಪಹರಣ ಕೇಸ್​ನಲ್ಲಿ ಶಾಸಕ ಹೆಚ್​.ಡಿ. ರೇವಣ್ಣ ಜೈಲಿನಿಂದ ಬಿಡುಗಡೆಯಾಗಿದ್ರೂ ಪತ್ನಿ ಭವಾನಿ ರೇವಣ್ಣ ಮಾತ್ರ ಇನ್ನೂ ರೇವಣ್ಣರನ್ನ ಭೇಟಿಯಾಗಿಲ್ಲ. ಇತ್ತ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್​ ಮಾಡಲು ಭವಾನಿಯೇ ಕಾರಣವೆಂದು ಕುಟುಂಬಸ್ಥರು ಸಿಟ್ಟಾಗಿದ್ದಾರೆ ಎನ್ನಲಾಗಿದೆ.

ಹೌದು, ಪ್ರಜ್ವಲ್​​ ರಾಸಲೀಲೆ ​ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಪ್ರಕರಣದ A2 ಆರೋಪಿ ಪ್ರಜ್ವಲ್​ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡ್ತಿದ್ದಾನೆ. ಇತ್ತ ರೇವಣ್ಣ ಪತ್ನಿ ಭವಾನಿ ರೇವಣ್ಣ ಏಕಾಂಗಿ ನಡೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪತಿ ಜೈಲಿಗೋದ್ರು ಭವಾನಿ ಹೋಗಲಿಲ್ಲ, ಜೈಲಿನಿಂದ ಬಿಡುಗಡೆಯಾಗಿ ಬಂದ್ರೂ ಸಹ ಬಂದು ಭೇಟಿ ಆಗಲಿಲ್ಲ. ಇನ್ನು ವಿವಾರಣೆಗೆ ಹಾಜರಾಗುವಂತೆ SIT ಅಧಿಕಾರಿಗಳು 2 ಬಾರಿ ನೊಟೀಸ್​ ನೀಡಿದ್ರೂ ಸಹ ಉತ್ತರಿಸದೇ ಸೈಲೆಂಟ್​ ಆಗಿದ್ದಾರೆ.

ಹೊಳೆನರಸೀಪುರದ ಮನೆಯಲ್ಲಿ ವಾಸ್ತವ್ಯ

ಭವಾನಿ ರೇವಣ್ಣ ಸೂಚನೆ ನೀಡಿದ ಹಿನ್ನೆಲೆ ಸಂತ್ರಸ್ತೆ ಕಿಡ್ನ್ಯಾಪ್​ ಮಾಡಲಾಗಿದೆ ಎಂಬ ಆರೋಪವಿದೆ. ಜೊತೆಗೆ ಮಗನ ಕಾಮಲೀಲೆಗಳ ಬಗ್ಗೆ ಮೊದಲೇ ತಿಳಿದಿದ್ರೂ ಬುದ್ಧಿ ಹೇಳಲ್ಲಿವೆಂದು ಕುಟುಂಬಸ್ಥರು ಭವಾನಿ ಮೇಲೆ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಭವಾನಿ ಸಹ ಕುಟುಂಬ ಸದಸ್ಯರಿಂದ ಅಂತರ ಕಾಯ್ದುಕೊಂಡು ಸಾಲಿಗ್ರಾಮ ಹಾಗೂ ಹೊಳೆನರಸೀಪುರದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರಂತೆ.

ಈ ಸುದ್ದಿ ಓದಿದ್ದೀರಾ? : ಪ್ರಜ್ವಲ್ ಹಾಸನದಲ್ಲಿದ್ದಾಗಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಇವಾಗ ಸಿಗ್ತರಾ? : ಕುಮಾರಸ್ವಾಮಿ

ಪ್ರೀತಂ ಗೌಡ ಆಪ್ತರ ಮನೆ ಮೇಲೆ ದಾಳಿ

ಪ್ರಜ್ವಲ್​​​​ ರಾಸಲೀಲೆ ಪೆನ್​​ಡ್ರೈವ್​​​​ ಹಂಚಿಕೆ ಕೇಸ್​​​​​ ಸಂಬಂಧ SIT ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರು ಸೇರಿದಂತೆ ಇತರರ ಮನೆ ಮೇಲೆ ದಾಳಿ ಮಾಡಿ ಮಹತ್ವದ ಸಾಕ್ಷಿ ಸಂಗ್ರಹಿಸಿದ್ದಾರೆ. 18 ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು 6 ಪೆನ್​ಡ್ರೈವ್​​ಗಳು, 7 ಹಾರ್ಡ್​​ ಡಿಸ್ಕ್​ಗಳು, ಎರಡು ಕಂಪ್ಯೂಟರ್​ ಹಾಗೂ ಲ್ಯಾಪ್​ಟಾಪ್​​ಗಳನ್ನ ವಶಕ್ಕೆ ಪಡೆದಿದ್ದಾರೆ. ಇದಷ್ಟೇ ಅಲ್ಲದೇ ಹಲವು ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸ್ತಿದ್ದಾರೆ.

ಎಸ್​​​ಐಟಿ ನೋಟಿಸ್​ಗೂ ಉತ್ತರಿಸದ ಭವಾನಿ

ಒಟ್ಟಾರೆ, ಭವಾನಿ ರೇವಣ್ಣ ಎಸ್​​​ಐಟಿ ನೋಟಿಸ್​ಗೂ ಉತ್ತರಿಸದೇ ಕುಟುಂಬಸ್ಥರೊಂದಿಗೆ ಅಂತರ ಕಾಯ್ದುಕೊಂಡಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ. ಜೊತೆಗೆ ಪೆನ್​​ಡ್ರೈವ್ ಕೇಸ್​ ಸಂಬಂಧ ಎಸ್​ಐಟಿ ತನಿಖೆ ಚುರುಕುಗೊಳಿಸಿದ್ದು, ಹಲವಾರು ಸಾಕ್ಷಿಗಳು ಲಭ್ಯವಾಗಿವೆ.

RELATED ARTICLES

Related Articles

TRENDING ARTICLES