Friday, May 17, 2024

ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ, ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ : ಪ್ರಧಾನಿ ಮೋದಿ

ಗುಜರಾತ್‌ : ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಕಾಂಗ್ರೆಸ್​​ ಪಾಕಿಸ್ತಾನದ ಬೆಂಬಲಿಗ ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್‌ನ ಆನಂದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಬಯಸುತ್ತದೆ ಎಂದು ಕುಟುಕಿದರು.

ಕಾಂಗ್ರೆಸ್​ ನಾಯಕ ರಾಹುಲ್‌ ಗಾಂಧಿ ಭಾಷಣವನ್ನು ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಹುಸೇನ್‌ ಮೆಚ್ಚಿಕೊಂಡಿದ್ದನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಮಧ್ಯೆ ಎಷ್ಟೊಂದು ಸ್ನೇಹ ಸಂಬಂಧ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿರುಗೇಟು ಕೊಟ್ಟರು.

ಯುವರಾಜನೇ ಪ್ರಧಾನಿ ಆಗಲೆಂದು ಬಯಕೆ

ಕಾಂಗ್ರೆಸ್‌ ಇಲ್ಲಿ ದುರ್ಬಲಗೊಳ್ಳುತ್ತಿದ್ದರೆ, ಅಲ್ಲಿ ಪಾಕಿಸ್ತಾನ ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕೆಂದು ಪ್ರಾರ್ಥಿಸುತ್ತಿದೆ. ಹೇಗಾದರೂ ಸರಿ ಯುವರಾಜನೇ ಭಾರತದ ಪ್ರಧಾನಿ ಆದರೆ ಸಾಕೆಂದು ಪಾಕಿಸ್ತಾನ ಬಯಸುತ್ತಿದೆ. ಕಾಂಗ್ರೆಸ್‌ ಮತ್ತು ಪಾಕಿಸ್ತಾನದ ನಡುವಿನ ಸ್ನೇಹ ಸಂಬಂಧ ಈಗಾಗಲೇ ಬಯಲಾಗಿದೆ ಎಂದು ಚಾಟಿ ಬೀಸಿದರು.

ಈ ಸುದ್ದಿ ಓದಿದ್ದೀರಾ? : ಸೋನಿಯಾ, ರಾಹುಲ್ ಬೇಲ್ ಮೇಲೆ ಇಲ್ಲವಾ? ಇಂಥವರು ಅಧಿಕಾರಕ್ಕೆ ಬರಬೇಕಾ? : ಜೆ.ಪಿ. ನಡ್ಡಾ

ಹಿಂದೂಗಳನ್ನು ವಿಭಜಿಸಲು ‘ಕೈ’ ಯತ್ನ

ಹಿಂದೂಗಳ ನಡುವೆ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಬಯಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಮ ಮತ್ತು ಶಿವನ ಬಗ್ಗೆ ಅತ್ಯಂತ ಅಪಾಯಕಾರಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ದುರುದ್ದೇಶದಿಂದ ಕೂಡಿದೆ. ಹಿಂದೂ ಸಮಾಜವನ್ನು ಒಡೆಯಲು ಸಂಚು ರೂಪಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

RELATED ARTICLES

Related Articles

TRENDING ARTICLES