Friday, May 17, 2024

ಟಾಸ್ ಗೆದ್ದ SRH ಬ್ಯಾಟಿಂಗ್ : ಈ ಪಂದ್ಯ ಗೆದ್ದು RR ಪ್ಲೇಆಫ್ ಪ್ರವೇಶಿಸುತ್ತಾ? ಕಾಮೆಂಟ್ ಮಾಡಿ

ಬೆಂಗಳೂರು : ರಾಜಸ್ಥಾನ್ ರಾಯಲ್ಸ್​ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐಪಿಎಲ್​ನ 50ನೇ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯ ಗೆದ್ದು ಪ್ಲೇಆಫ್​ಗೆ ಪ್ರವೇಶಿಸಲು ರಾಜಸ್ಥಾನ್ ರಾಯಲ್ಸ್​ ಸಜ್ಜಾಗಿದೆ.

ಪ್ರಸಕ್ತ ಟೂರ್ನಿಯಲ್ಲಿ ರಾಜಸ್ಥಾನ 9 ಪಂದ್ಯಗಳನ್ನು ಆಡಿದೆ. ಈ ಪೈಕಿ 8 ಪಂದ್ಯಗಳಲ್ಲಿ ಗೆಲುವ ಸಾಧಿಸಿದೆ. ಹೈದರಾಬಾದ್ 9 ಪಂದ್ಯಗಳನ್ನು ಆಡಿದ್ದು 5 ಗೆಲುವು ಹಾಗೂ 4 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ಭರ್ಜರಿ ಫಾರ್ಮ್​ನಲ್ಲಿದೆ. ಇತ್ತ, ಹೈದರಾಬಾದ್ ಬ್ಯಾಕ್​ ಟು ಬ್ಯಾಕ್​ ಸೋಲಿನಿಂದ ಕಂಗೆಟ್ಟಿದೆ.

ಹೈದರಾಬಾದ್ ತಂಡ

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಅನ್ಮೋಲ್​ಪ್ರೀತ್ ಸಿಂಗ್, ಹೆನ್ರಿಚ್ ಕ್ಲಾಸೆನ್ (ವಿ.ಕೀ.), ನಿತೀಶ್ ರೆಡ್ಡಿ, ಅಬ್ದುಲ್ ಸಮದ್, ಜಾನ್ಸೆನ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ. ನಟರಾಜನ್

ಹೈದರಾಬಾದ್ ಇಂಪ್ಯಾಕ್ಟ್ ಪ್ಲೇಯರ್ಸ್ : ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಂಡೆ, ಐಡೆನ್ ಮರ್ಕ್ರಾಮ್, ಸನ್ವಿರ್ ಸಿಂಗ್, ಜಯದೇವ್ ಉನದ್ಕತ್

ರಾಜಸ್ಥಾನ ತಂಡ

ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ.), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್

ರಾಜಸ್ಥಾನ ಇಂಪ್ಯಾಕ್ಟ್ ಪ್ಲೇಯರ್ಸ್ : ಜೋಸ್ ಬಟ್ಲರ್, ಟಾಮ್ ಕೊಹ್ಲರ್-ಕಾಡ್ಮೋರ್, ಶುಭಂ ದುಬೆ, ನವದೀಪ್ ಸೈನಿ, ತನುಷ್ ಕೋಟ್ಯಾನ್

RELATED ARTICLES

Related Articles

TRENDING ARTICLES