Thursday, May 9, 2024

ಮಹಿಳೆ ಅಡುಗೆ ಮಾಡಲು ಲಾಯಕ್ಕು ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಬ್ಯಾಡ್ಮಿಂಟನ್ ತಾರೆ ಸೈನ್ ನೆಹ್ವಾಲ್ ಆಕ್ರೋಶ

ಬೆಂಗಳೂರು:ರಾಜ್ಯದ ಹಿರಿಯ ರಾಜಕಾರಣಿ, ಹಾಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ  ಮಹಿಳೆಯರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.ಈ ಕುರಿತಾಗಿ ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಕಿಡಿಕಾರಿದ್ದಾರೆ.

ಹೌದು,ಕೆಲದಿನಗಳ ಹಿಂದಷ್ಟೇ ಭಾರತೀಯ ಜನತಾ ಪಕ್ಷವು ದಾವಣಗೆರೆ ಕ್ಷೇತ್ರಕ್ಕೆ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಗಾಯಿತ್ರಿ ಸಿದ್ದೇಶ್ವರ್ ಅವರ ಹೆಸರನ್ನು ಘೋಷಿಸಿತ್ತು. ಈ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ‘ರಾಜಕೀಯಕ್ಕೆ ಬಂದ ಮೇಲೆ ಹೇಗೆ ಮಾತನಾಡಬೇಕು ಎಂದು ಗೊತ್ತಿರಬೇಕು. ಆದರೆ ಅವರಿಗೆ ಮನೆಯೊಳಗೆ ಅಡುಗೆ ಮಾಡುವುದಕ್ಕಷ್ಟೇ ಬರುತ್ತೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಾಮನೂರು ಹೇಳಿಕೆಗೆ ಕಿಡಿ ಕಾರಿದ ಸೈನಾ ನೆಹ್ವಾಲ್

ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಸೈನಾ ನೆಹ್ವಾಲ್, “ಮಹಿಳೆ ಅಡುಗೆ ಮಾಡಲು ಲಾಯಕ್ಕು” ಎಂದು ಶಾಮನೂರು ಶಿವಶಂಕರಪ್ಪನವರು ಹೇಳಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ಮೇಲಿನ ಈ ಸೆಕ್ಸಿಸ್ಟ್ ಹೇಳಿಕೆ ಬಗ್ಗೆ ಪಕ್ಷವೂ ಲಡ್ಕಿ ಹೂಂ ಲಡ್‌ ಸಕ್ತಿ ಹೂಂ(ನಾನು ಹುಡುಗಿಯಿರಬಹುದು, ಆದ್ರೆ ಹೋರಾಡುತ್ತೇನೆ) ಎನ್ನುವ ಕನಿಷ್ಠ ಬೆಂಬಲವನ್ನಾದರೂ ನೀಡಬೇಕು ಎನ್ನುವ ನಿರೀಕ್ಷಿಸುತ್ತೇನೆ.

 

RELATED ARTICLES

Related Articles

TRENDING ARTICLES