Thursday, May 9, 2024

ಲೋಕ ಸಮರಕ್ಕೆ ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್: ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ ಇಲ್ಲಿದೆ ಮಾಹಿತಿ

ಬೆಂಗಳೂರು: ಲೋಕ ಸಭೆ ಚುನಾವಣೆಗೆ ಕರ್ನಾಟಕದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.ಎರಡು ಹಂತದಲ್ಲಿ ಮತದಾನ ನಡೆಯಲಿದ್ದು,ಯಾವ ಕ್ಷೇತ್ರದಲ್ಲಿ ಯಾರ ವಿರುದ್ಧ ಯಾರು ಸ್ಪರ್ಧಿಸುತ್ತಿದ್ದಾರೆ. ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟದಲ್ಲಿ 2 ಹಂತದ ಮತದಾನ

ಮೊದಲ ಹಂತದ ಚುನಾವಣೆ ಏಪ್ರಿಲ್​ 26ರಂದು ನಡೆಯಲಿದೆ. ಈಗಾಗಲೇ ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏ.4 ಇರಲಿದೆ. ನಾಮಪತ್ರ ಹಿಂಪಡೆಯುವ ಕೊನೆ ದಿನ ಏ.8 ಆಗಿದೆ.

ಕ್ರ.ಸಂ ಕ್ಷೇತ್ರಗಳು ಎನ್​ಡಿಎ ಒಕ್ಕೂಟ ಕಾಂಗ್ರೆಸ್​ ಪಕ್ಷ
1 ಉಡುಪಿ-ಚಿಕ್ಕಮಗಳೂರು ಕೋಟಾ ಶ್ರೀನಿವಾಸ ಪೂಜಾರಿ ಜಯಪ್ರಕಾಶ್ ಹೆಗ್ಡೆ
2 ಹಾಸನ ಪ್ರಜ್ವಲ್ ರೇವಣ್ಣ (ಜೆಡಿಎಸ್​) ಶ್ರೇಯಸ್‌ ಪಟೇಲ್‌
3 ದಕ್ಷಿಣಕನ್ನಡ ಕ್ಯಾ.ಬ್ರಿಜೇಶ್ ಚೌಟಾ ಪದ್ಮರಾಜ್
4 ಚಿತ್ರದುರ್ಗ ಗೋವಿಂದ ಕಾರಜೋಳ ಬಿ ಎನ್ ಚಂದ್ರಪ್ಪ
5 ತುಮಕೂರು ವಿ. ಸೋಮಣ್ಣ ಎಸ್‌.ಪಿ. ಮುದ್ದಹನುಮೇಗೌಡ
6 ಮಂಡ್ಯ ಹೆಚ್.ಡಿ. ಕುಮಾರಸ್ವಾಮಿ (ಜೆಡಿಎಸ್​) ವೆಂಕಟರಾಮೇಗೌಡ (ಸ್ಟಾರ್‌ ಚಂದ್ರು)
7 ಮೈಸೂರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂ. ಲಕ್ಷ್ಮಣ್
8 ಚಾಮರಾಜನಗರ ಎಸ್. ಬಾಲರಾಜು ಸುನಿಲ್ ಬೋಸ್
9 ಬೆಂಗಳೂರು ಗ್ರಾಮಾಂತರ ಡಾ.ಸಿ.ಎನ್. ಮಂಜುನಾಥ್ ಡಿ.ಕೆ. ಸುರೇಶ್‌
10 ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ ಪ್ರೊ.‌ರಾಜೀವ್ ಗೌಡ
11 ಬೆಂಗಳೂರು ಕೇಂದ್ರ ಪಿ.ಸಿ. ಮೋಹನ್ ಮನ್ಸೂರ್ ಖಾನ್
12 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಸೌಮ್ಯ ರೆಡ್ಡಿ
13 ಚಿಕ್ಕಬಳ್ಳಾಪುರ ಡಾ. ಸುಧಾಕರ್‌ ರಕ್ಷಾ ರಾಮಯ್ಯ
14 ಕೋಲಾರ ಮಲ್ಲೇಶ್​ ಬಾಬು (ಜೆಡಿಎಸ್​) ಕೆ.ವಿ.ಗೌತಮ್​
15 ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ ಪ್ರಿಯಾಂಕಾ ಜಾರಕಿಹೊಳಿ
16 ಬೆಳಗಾವಿ ಜಗದೀಶ್ ಶೆಟ್ಟರ್ ಮೃಣಾಲ್ ಹೆಬ್ಬಾಳ್ಕರ್​
17 ಬಾಗಲಕೋಟೆ ಪಿ.ಸಿ. ಗದ್ದಿಗೌಡರ ಸಂಯುಕ್ತ ಪಾಟೀಲ್
18 ವಿಜಯಪುರ ರಮೇಶ್ ಜಿಗಜಿಣಗಿ ರಾಜು ಅಲಗೋರ್‌
19 ಕಲಬುರಗಿ ಉಮೇಶ್ ಜಾಧವ್ ಡಾ. ರಾಧಾಕೃಷ್ಣ ದೊಡ್ಡಮನಿ
20 ರಾಯಚೂರು ರಾಜಾ ಅಮರೇಶ್ವರ್​ ನಾಯಕ್ ಕುಮಾರ್ ನಾಯ್ಕ್
21 ಬೀದರ್​ ಭಗವಂತ ಖೂಬಾ ಸಾಗರ್ ಖಂಡ್ರೆ
22 ಕೊಪ್ಪಳ ಡಾ. ಬಸವರಾಜ ಕ್ಯಾವಟೂರ್​ ರಾಜಶೇಖರ್ ಹಿಟ್ನಾಳ್
23 ಬಳ್ಳಾರಿ ಶ್ರೀರಾಮುಲು ಇ. ತುಕರಾಂ
24 ಹಾವೇರಿ ಬಸವರಾಜ ಬೊಮ್ಮಾಯಿ ಅನಂದ್‌ಸ್ವಾಮಿ ಗಡ್ಡದೇವರಮಠ
25 ಧಾರವಾಡ ಪ್ರಹ್ಲಾದ್ ಜೋಶಿ ವಿನೋದ್ ಅಸೂಟಿ
26 ಉತ್ತರಕನ್ನಡ ವಿಶ್ವೇಶ್ವರ ಹೆಗೆಡೆ ಕಾಗೇರಿ ಅಂಜಲಿ‌ ನಿಂಬಾಳ್ಕರ್
27 ದಾವಣಗೆರೆ ಗಾಯತ್ರಿ ಸಿದ್ದೇಶ್ವರ ಪ್ರಭಾವತಿ ಮಲ್ಲಿಕಾರ್ಜುನ್
28 ಶಿವಮೊಗ್ಗ ಬಿ.ವೈ. ರಾಘವೇಂದ್ರ ಗೀತಾ ಶಿವರಾಜ್‌ಕುಮಾರ್‌

 

ಒಟ್ಟಿನಲ್ಲಿ ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಎಲ್ಲ ಅಭ್ಯರ್ಥಿಗಳು ಮತಬೇಟೆ ಆರಂಭಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನಡೆಯಲಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ

RELATED ARTICLES

Related Articles

TRENDING ARTICLES