Thursday, May 9, 2024

ನನಗೂ ಮದುವೆ ಆಗೋ ಆಸೆ.. ಮಕ್ಕಳು ಬೇಕು.. ಆದರೆ..: ವಿಜಯ್ ದೇವರಕೊಂಡ

ದಕ್ಷಿಣ ಭಾರತದ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ಆಗಾಗ ಸಿನಿಮಾಗಿಂತ ಖಾಸಗಿ ಬದುಕಿನ ವಿಚಾರವಾಗಿ ಹೆಚ್ಚುಚ್ಚು ಸುದ್ದಿಯಾಗುತ್ತಾರೆ. ಇದೀಗ ವಿಜಯ್ ದೇವರಕೊಂಡ ತಮ್ಮ ಮದುವೆ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಲವ್ ಮ್ಯಾರೇಜ್ ಆಗುವುದಾಗಿ ಸ್ವತಃ ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ ಖ್ಯಾತ ಖಳ ನಟ ನಿಧನ!

ಚೆನ್ನೈನಲ್ಲಿ ‘ಫ್ಯಾಮಿಲಿ ಸ್ಟಾರ್’ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ, ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ವಿಜಯ್ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸಿದ್ದೇನೋ ನಿಜ. ಹಾಗೇ ಇದೇ ವರ್ಷ ರಿಯಲ್ ಲೈಫ್‌ನಲ್ಲೂ ಫ್ಯಾಮಿಲಿ ಸ್ಟಾರ್ ಆಗುವ ಸಾಧ್ಯತೆ ಇದೆಯೇ ಎಂದು ಪ್ರಶ್ನೆ ಮಾಡಲಾಗಿದೆ.

ಆ ಪ್ರಶ್ನೆಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿ, ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ನನಗೂ ಮದುವೆ ಆಗಬೇಕೆಂಬ ಆಸೆ ಇದೆ. ನನಗೂ ಮಕ್ಕಳು ಬೇಕು. ಆದರೆ, ಈ ವರ್ಷ ಖಂಡಿತಾ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES