Sunday, May 19, 2024

ಹೃದಯಾಘಾತದಿಂದ ಖ್ಯಾತ ಖಳ ನಟ ನಿಧನ!

ಬೆಂಗಳೂರು: ಹೃದಯಾಘಾತದಿಂದ ತಮಿಳು ಖ್ಯಾತ ಖಳ ನಟ ಡೇನಿಯಲ್ ಬಾಲಾಜಿ ಮಾರ್ಚ್ 29ರ ಶುಕ್ರವಾರ ರಾತ್ರಿ ನಿಧನರಾದರು. ಡೇನಿಯಲ್ ಬಾಲಾಜಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ನಟ ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದರು.

ಬಾಲಾಜಿ ಅವರ ನಿಧನದ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಡೇನಿಯಲ್ ಬಾಲಾಜಿ ಒಬ್ಬ ಉತ್ತಮ ನಟ. ʻವೆಟ್ಟೈಯಾಡು ವಿಲಯಾಡುʼ, ʻಪೊಲ್ಲಾಧವನ್ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: KPSC ಕಚೇರಿಯಿಂದ ಆಯ್ಕೆ ಪಟ್ಟಿ ನಾಪತ್ತೆ: ದೂರು ದಾಖಲು

ಡೇನಿಯಲ್ ಬಾಲಾಜಿ ಅವರ ಹಠಾತ್ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತಗೊಳಿಸಿದೆ. ನಿರ್ದೇಶಕ ಮೋಹನ್ ರಾಜಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬಾಲಾಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸಿದರು, “ಇದೊಂದು ದುಃಖದ ಸುದ್ದಿ. ನನಗೆ ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಲು ಅವರೇ ಸ್ಫೂರ್ತಿ. ತುಂಬಾ ಒಳ್ಳೆಯ ಸ್ನೇಹಿತ. ಅವರ ಆತ್ಮಕೆ ಶಾಂತಿ ಸಿಗಲಿ.”ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES