Saturday, April 27, 2024

ಕುಟುಂಬ ರಾಜಕಾರಣ ಹೇಳಿಕೆ: ಸಂಸದ ಡಿಕೆ ಸುರೇಶ್​ಗೆ ಟಾಂಗ್ ನೀಡಿದ ಡಾ.ಮಂಜುನಾಥ್​

ರಾಮನಗರ: ಕುಟುಂಬ ರಾಜಕಾರಣ ಆಗಿ ಇದೀಗ ಅಳಿಯನನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ ಎಂದು ಹಾಲಿ ಸಂಸದ ಡಿಕೆ ಸುರೇಶ್​ ಹೇಳಿಕೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್​ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣ ಅನ್ನೋದು ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಸದ್ಯ ಅಪ್ರಸ್ತುತ, ಇತ್ತೀಚಗೆ ಬಿಡುಗಡೆಯಾದ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ನೋಡಿದರೆ ತಿಳಿಯುತ್ತದೆ, ಮಗ, ಮಗಳು, ಅಣ್ಣ, ಸೊಸೆ ಎಲ್ಲರೂ ಇದ್ದಾರೆ. ಆದ್ದರಿಂದ ಸದ್ಯ ಈ ಕುಟುಂಬ ರಾಜಕಾರಣ ಅನ್ನೋದು ಸದ್ಯ ಅಪ್ರಸ್ತುತ ಎಂದರು.

ಕಳೆದ ಹತ್ತು ದಿನಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. 8 ವಿಧಾನಸಭೆ ಕ್ಷೇತ್ರಗಳಲ್ಲಿ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ, ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸರಣಿ ಸಭೆಗಳನ್ನ ಮಾಡುತ್ತಿದ್ದಾರೆ. ನಿನ್ನೆ ಬೆಂಗಳೂರು ದಕ್ಷಿಣ, ಆರ್ ಆರ್ ನಗರ, ಕುಣಿಗಲ್ ಗೆ ಹೋಗಿದ್ದೆ. ಬಹುಮುಖ್ಯವಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಎರಡೂ ಹೃದಯ ಒಟ್ಟಾಗಿದೆ‌. ಇದನ್ನೆಲ್ಲ ನೋಡುತ್ತಿದ್ದರೇ ನಮ್ಮ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಈಶ್ವರಪ್ಪ

ಧರ್ಮ ಮತ್ತು ಅಧರ್ಮದ ನಡುವೆ ಈ ಚುನಾವಣೆ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನಾನು ವ್ಯಾಖ್ಯಾನ ಮಾಡೋದಕ್ಕೆ ಹೋಗೋದಿಲ್ಲ. ಪ್ರತಿಯೊಂದು ಚುನಾವಣೆ ಆರೋಗ್ಯಕರ ಸ್ಫರ್ಧೆಯಾಗಿರಬೇಕು. ಮತದಾರರನ್ನ ಯಾವುದೇ ರೀತಿಯ ಅಡ್ಡ ದಾರಿಗೆ ಎಳೆಯಬಾರದು ಅಷ್ಟೇ ಎಂದರು.

ಪಾರದರ್ಶಕ ಚುನಾವಣೆಗೆ ಪ್ಯಾರ ಮಿಲಿಟರಿ ಬೇಕು ಎಂಬ ಮಾಜಿ ಸಚಿವ ಮುನಿರತ್ನ ಹೇಳಿಕೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಮ್ಮ‌ ವರಿಷ್ಟರು ಎಲ್ಲಾ ಗಮನಹರಿಸಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದನ್ನ ನೋಡೋಣ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES