Thursday, May 9, 2024

ಡೆಲ್ಲಿ ಆರ್ಭಟಕ್ಕೆ MI ಬರ್ನ್ : ಮುಂಬೈಗೆ 258 ರನ್ ಬೃಹತ್ ಟಾರ್ಗೆಟ್

ಬೆಂಗಳೂರು : ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟರ್​ಗಳು ರನ್​ ಮಲೆಯನ್ನೇ ಸುರಿಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 43ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 257 ರನ್​ ಗಳಿಸಿದೆ.

ಐಪಿಎಲ್​ ಇತಿಹಾಸದಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ಇದೇ ಮೊದಲ ಬಾರಿಗೆ 250 ರನ್​ ಗಳಿಸಿದೆ ಎಂಬುದು ಗಮನಾರ್ಹ. ಇನ್ನಿಂಗ್ಸ್​ ಆರಂಭಿಸಿದ ಡೆಲ್ಲಿಗೆ ಫ್ರೇಸರ್ ಹಾಗೂ ಅಭಿಷೇಕ್ ಪೊರೆಲ್ ಅದ್ಭುತ ಆರಂಭ ನೀಡಿದರು. ಹೋಪ್, ನಾಯಕ ಪಂತ್, ಸ್ಟಬ್ಸ್​ ಮುಂಬೈ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಬರೋಬ್ಬರಿ 17 ಸಿಕ್ಸ್​ ಡೆಲ್ಲಿ ಪರ ದಾಖಲಾದವು.

ಡೆಲ್ಲಿ ಕ್ಯಾಪಿಟಲ್ಸ್​ ಪರ ಫ್ರೇಸರ್ ಮೆಕ್​ ಗುರ್ಕ್​ 27 ಎಸೆತಗಳಲ್ಲಿ 84 ರನ್​ ಚಚ್ಚಿದರು. ಸ್ಟಬ್ಸ್​ 48, ಹೋಪ್ 41, ಪೊರೆಲ್ 36, ನಾಯಕ ರಿಷಭ್ ಪಂತ್ 29 ರನ್​ ಸಿಡಿಸಿದರು. ಮುಂಬೈ ಪರ ವುಡ್, ಬುಮ್ರಾ, ನಬಿ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು. ವುಡ್ 68 ಹಾಗೂ ತುಷಾರ 56 ರನ್​ ನೀಡಿ ದುಬಾರಿಯಾದರು.

RELATED ARTICLES

Related Articles

TRENDING ARTICLES