Monday, May 20, 2024

ಟಾಸ್ ಸೋತ RCB ಬ್ಯಾಟಿಂಗ್ : RCBಯಿಂದ ಸ್ಫೋಟಕ ಬ್ಯಾಟರ್ ಮ್ಯಾಕ್ಸ್​ವೆಲ್ ಔಟ್

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ನಾಯಕ ಸ್ಯಾಮ್ ಕರ್ರನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಈ ರೋಚನ ಪಂದ್ಯ ನಡೆಯುತ್ತಿದೆ. ಇದು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇಂದಿನ ಪಂದ್ಯದಿಂದ RCB ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಗುಳಿದಿದ್ದಾರೆ.

ಸತತ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಆರ್​ಸಿಬಿ ತಂಡ ಪಂಜಾಬ್​ ಕಿಂಗ್ಸ್​ ಮಣಿಸಲು ರಣತಂತ್ರ ರೂಪಿಸಿದೆ. ಇತ್ತ, ಪಂಜಾಬ್ ಕೂಡ ಆರ್​ಸಿಬಿ ಮಣಿಸಿ ಟೂರ್ನಿಯಲ್ಲಿ ಜೀವಂತವಾಗಿರಲು ಸಜ್ಜಾಗಿದೆ. ಇಂದು ಒಂದು ತಂಡ ಸೋಲಲೇಬೇಕಿದ್ದು, ಸೋತವರು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ಸಹ 11 ಪಂದ್ಯಗಳನ್ನು ಆಡಿದ್ದು 4 ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆರ್​ಸಿಬಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಪಂಜಾಬ್ 8ನೇ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕ್ಯಾಮೆರಾನ್ ಗ್ರೀನ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ (ವಿ.ಕೀ), ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್

ಆರ್​ಸಿಬಿ ಇಂಪ್ಯಾಕ್ಟ್​ ಪ್ಲೇಯರ್ : ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಜಯ್‌ಕುಮಾರ್ ವೈಶಾಕ್, ಯಶ್ ದಯಾಳ್, ಮಯಾಂಕ್ ದಾಗರ್

ಪಂಜಾಬ್ ಕಿಂಗ್ಸ್

ಜಾನಿ ಬೈರ್‌ಸ್ಟೋವ್(ವಿ.ಕೀ.), ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೊಸೊವ್, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಸ್ಯಾಮ್ ಕರ್ರನ್ (ನಾಯಕ), ಅಶುತೋಷ್ ಶರ್ಮಾ, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ವಿಧ್ವತ್ ಕಾವೇರಪ್ಪ

ಪಂಜಾಬ್ ಇಂಪ್ಯಾಕ್ಟ್ ಪ್ಲೇಯರ್ : ಹರ್‌ಪ್ರೀತ್ ಬ್ರಾರ್, ತನಯ್ ತ್ಯಾಗರಾಜನ್, ರಿಷಿ ಧವನ್, ಜಿತೇಶ್ ಶರ್ಮಾ, ನಾಥನ್ ಎಲ್ಲಿಸ್

RELATED ARTICLES

Related Articles

TRENDING ARTICLES