Friday, May 10, 2024

14 ಕ್ಷೇತ್ರಗಳಿಗೆ ಹೆಚ್ಚುವರಿ ಉಸ್ತುವಾರಿಗಳನ್ನ ನೇಮಿಸಿದ ಕಾಂಗ್ರೆಸ್ : ಯಾರಿಗೆ ಯಾವ ಕ್ಷೇತ್ರ? ಇಲ್ಲಿದೆ ಪಟ್ಟಿ

ಬೆಂಗಳೂರು : ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್​ ಹೆಚ್ಚುವರಿ ಉಸ್ತುವಾರಿಗಳನ್ನು ನೇಮಿಸಿದೆ.

ಎರಡನೇ ಹಂತದ ಲೋಕಸಭೆ ಎಲೆಕ್ಷನ್​ಗೆ ಈಗಾಗಲೇ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಾಕಿ 14 ಕ್ಷೇತ್ರಗಳಿಗೆ ಹೆಚ್ಚುವರಿ ಹೆಚ್ಚುವರಿ ಉಸ್ತುವಾರಿಗಳನ್ನ ನೇಮಿಸಿದ್ದಾರೆ.

ಹೈವೋಲ್ಟೇಜ್ ಕ್ಷೇತ್ರವಾಗಿರುವ ಶಿವಮೊಗ್ಗಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಡಾ.ಜಿ. ಪರಮೇಶ್ವರ್ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಮಲಿಂಗಾರೆಡ್ಡಿ ಅವರನ್ನು ಉಸ್ತುವಾರಿಯನ್ನಾಗಿ ನೀಡಲಾಗಿದೆ.

ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಪಕ್ಷ ಅಂದ್ರೆ ಸಂಸ್ಕೃತಿ, ಸಂಸ್ಕಾರ ಇಲ್ಲದ ಪಕ್ಷ : ಜನಾರ್ದನ ರೆಡ್ಡಿ

  • ದಾವಣಗೆರೆ : ಡಾ.ಜಿ. ಪರಮೇಶ್ವರ್
  • ಹುಬ್ಬಳ್ಳಿ-ಧಾರವಾಡ : ದಿನೇಶ್ ಗುಂಡೂರಾವ್
  • ಉತ್ತರ ಕನ್ನಡ : ಕೆ.ಜೆ. ಜಾರ್ಜ್
  • ಚಿಕ್ಕೋಡಿ : ಕೆ.ಎಚ್. ಮುನಿಯಪ್ಪ
  • ಹಾವೇರಿ : ಕೃಷ್ಣಬೈರೇಗೌಡ
  • ಬಳ್ಳಾರಿ : ರಾಮಲಿಂಗಾ ರೆಡ್ಡಿ
  • ಬೆಳಗಾವಿ : ಬೈರತಿ ಸುರೇಶ್
  • ಕೊಪ್ಪಳ : ಎಂ.ಸಿ. ಸುಧಾಕರ್
  • ರಾಯಚೂರು : ಕೆ.ಎನ್. ರಾಜಣ್ಣ
  • ಬೀದರ್ : ಕೆ. ವೆಂಕಟೇಶ್
  • ಶಿವಮೊಗ್ಗ : ಎನ್. ಚಲುವರಾಯಸ್ವಾಮಿ
  • ಬಿಜಾಪುರ : ಹೆಚ್.ಸಿ. ಮಹಾದೇವಪ್ಪ

RELATED ARTICLES

Related Articles

TRENDING ARTICLES