Monday, May 20, 2024

ಶತಕ ವಂಚಿತ ಕೊಹ್ಲಿ, ಅಬ್ಬರಿಸಿದ ರಜತ್ : ಪಂಜಾಬ್ ವಿರುದ್ಧ ಬೃಹತ್ ಮೊತ್ತ ಪೇರಿಸಿದ RCB

ಬೆಂಗಳೂರು : ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಬೃಹತ್ ಮೊತ್ತ ಕಲೆಹಾಕಿತು. ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್​ ಗಳಿಸಿತು.

ಇನ್ನಿಂಗ್ಸ್ ಆರಂಭಿಸಿದ ಆರ್​ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಕನ್ನಡಿಗ ವಿಧ್ವತ್ ಕಾವೇರಪ್ಪ ದೊಡ್ಡ ಆಘಾತ ನೀಡಿದರು. ನಾಯಕ ಡು ಪ್ಲೆಸಿಸ್ 9 ಹಾಗೂ ವಿಲ್ ಜಾಕ್ಸ್ 12 ರನ್​ ಗಳಿಸಿ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು. ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಆಸರೆಯಾದರು.

ಪಂಜಾಬ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ರಜತ್ ಕೇವಲ 23 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 3 ಬೌಂಡಿರಿಗಳ ನೆರವಿನೊಂದಿಗೆ 55 ರನ್​ ಸಿಡಿಸಿದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 6 ಸಿಕ್ಸ್​ ಹಾಗೂ 7 ಬೌಂಡರಿಗಳೊಂದಿಗೆ 92 ರನ್​ ಸಿಡಿಸಿದರು. 8 ರನ್​ಗಳಿಂದ ಶತಕ ವಂಚಿತರಾದರು.

ಉಳಿದಂತೆ, ಗ್ರೀನ್ ಹಾಗೂ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು. ಗ್ರೀನ್ 46 ರನ್, ದಿನೇಶ್ ಕಾರ್ತಿಕ್ 18 ರನ್ ಗಳಿಸಿದರು. ಪಂಜಾಬ್ ಪರ ಕೊನೆಯ ಓವರ್​ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಒಂದೇ ಓವರ್​ನಲ್ಲಿ ಮೂರು ವಿಕೆಟ್ ಪಡೆದು ಆರ್​ಸಿಬಿಗೆ ಆಘಾತ ನೀಡಿದರು. ವಿಧ್ವತ್ ಕಾವೇರಪ್ಪ 2, ಅರ್ಷದೀಪ್ ಸಿಂಗ್ ಹಾಗೂ ನಾಯಕ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES