Monday, May 20, 2024

ನಟ ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ

ನವದೆಹಲಿ : ತೆಲುಗು ಚಿತ್ರರಂಗದ ಮೆಗಾಸ್ಟಾರ್ ಜಿರಂಜೀವಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಪದ್ಮ ವಿಭೂಷಣ ಲಭಿಸಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಹಿರಿಯ ನಟಿ ವೈಜಯಂತಿಮಾಲಾ, ನಟ ಚಿರಂಜೀವಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.

ಇದರ ಜೊತೆಗೆ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ದಿವಂಗತ ಎಂ. ಫಾತಿಮಾ ಬೀವಿ ಮತ್ತು ಬಾಂಬೆ ಸಮಾಚಾರ್ ಮಾಲೀಕ ಹೊರ್ಮುಸ್ಜಿ ಎನ್ ಕಾಮಾ ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

90 ವರ್ಷದ ವೈಜಯಂತಿಮಾಲಾ ಮತ್ತು ಚಿರಂಜೀವಿ ಅವರಿಗೆ ಪದ್ಮವಿಭೂಷಣ ನೀಡಿದರೆ, ಬೀವಿ, ರಾಜಗೋಪಾಲ್, ವಿಜಯಕಾಂತ್, ರಿಂಪೋಚೆ ಮತ್ತು ವ್ಯಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

2006ರಲ್ಲಿ ಪದ್ಮ ಭೂಷಣ

ಚಿರಂಜೀವಿ ಅವರ ಕಲಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪ್ರತಿಷ್ಠಿತ ಪದ್ಮ ವಿಭೂಷಣ ಪ್ರಶಸ್ತಿಯನ್ನು ಘೋಷಿಸಿದೆ. ಈ ಹಿಂದೆ 2006ರಲ್ಲಿ ಚಿರಂಜೀವಿ ಪದ್ಮ ಭೂಷಣಕ್ಕೆ ಭಾಜನರಾಗಿದ್ದರು. ಇದೀಗ 68ನೇ ವಯಸ್ಸಿನಲ್ಲಿ ಪದ್ಮ ವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ತಂದೆಗೆ ನಟ ರಾಮ್ ಚರಣ್ ತೇಜಾ ದಂಪತಿ ಹಾಗೂ ಪತ್ನಿ ಸಾಥ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES