Thursday, May 9, 2024

ಬೇಗ ಬನ್ನಿ.. ಮೋದಿ 3,000 ಕೊಡ್ತಾರಂತೆ! : ಅಂಚೆ ಕಚೇರಿಯಲ್ಲಿ ಮಹಿಳೆಯರ ನೂಕುನುಗ್ಗಲು

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬೊಬ್ಬರಿಗೆ 3,000 ರೂ. ಕೊಡ್ತಾರೆ ಎಂಬ ವದಂತಿ ನಂಬಿ ಮಹಿಳೆಯರು ಅಂಚೆ ಕಚೇರಿಗೆ ದೌಡಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್‌ ಕಾರ್ಡ್ ಕುಟುಂಬದ ಮಹಿಳೆಯರಿಗೆ 3 ಸಾವಿರ ಜಮಾ ಮಾಡಲಾಗುವುದು ಎಂಬ ವದಂತಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.

ಬೆಳಗ್ಗೆ 8 ರಿಂದ ನಗರದ ವಿವಿಧ ಅಂಚೆ ಕಚೇರಿಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತಿದ್ದು ಕಂಡು ಬಂದಿತು. ಸ್ಟೇಷನ್‌ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ ಎದುರು ರಾತ್ರಿ 8 ರವರೆಗೆ ಸರದಿ ಸಾಲಿನಲ್ಲಿ ನಿಂತುಕೊಂಡಿರುವ ದೃಶ್ಯ ಗಳು ಕಂಡು ಬಂದಿತು. ಹಳೇಹುಬ್ಬಳ್ಳಿ, ಗಿರಣಿಚಾಳ, ಉದ್ಯಮನಗರ, ನವಗರ, ಟ್ರಾಫಿಕ್‌ ಐಲ್ಯಾಂಡ್‌ ಉಪ ಅಂಚೆ ಕಚೇರಿಗಳ ಎದುರು ಸಹ ಇದೇ ವಾತಾವರಣ ಕಂಡು ಬಂದಿತು.

ಮಹಿಳೆಯರು ನಮ್ಮ ಮಾತು ಒಪ್ಪುತ್ತಿಲ್ಲ

ಪ್ರಧಾನ ಅಂಚೆ ಕಚೇರಿಯ ಹಿರಿಯ ಪೋಸ್ಟ್‌ಮಾಸ್ಟರ್ ಎಂ. ಕುಮಾರಸ್ವಾಮಿ ಮಾತನಾಡಿ, ಅಂಚೆ ಕಚೇರಿಯಲ್ಲಿ ಮಹಿಳೆಯರು ಮೋದಿ ಖಾತೆ ತೆರೆದರೆ ಮೂರು ತಿಂಗಳಿಗೊಮ್ಮೆ 3 ಸಾವಿರ ಖಾತೆಗೆ ಜಮಾ ಆಗುವುದು ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ನಂಬಿದ ಮಹಿಳೆಯರು ಬೆಳಿಗ್ಗೆಯಿಂದ ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದಾರೆ. ಅಂಚೆ ಕಚೇರಿಗಳ ಎದುರು ನೋಟಿಸ್‌ ಅಂಟಿಸಿ, ಸುಳ್ಳು ಸುದ್ದಿ ನಂಬಬೇಡಿ ಎಂದಿದ್ದೇವೆ. ಆದರೂ, ಮಹಿಳೆಯರು ನಮ್ಮ ಮಾತು ಒಪ್ಪುತ್ತಿಲ್ಲ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES