Friday, May 10, 2024

ಅಕ್ರಮ ಸಂಬಂಧ : ಗ್ರಾಮಕ್ಕೆ ಬರುವ ಮೊದಲೇ ಬಿತ್ತು ಇಬ್ಬರ ಹೆಣ

ವಿಜಯಪುರ : ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆದಿದೆ.

ಮೃತರು ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಹಾಗೂ ಪಾರ್ವತಿ ತಳವಾರ (38) ಎಂದು ಗುರುತಿಸಲಾಗಿದೆ. ಗಣಿ ಗ್ರಾಮಕ್ಕೆ ಬರುವ ಮೊದಲೇ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಲಾಗಿದೆ.

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಜೋಡಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸೋಮವಾರ ರಾತ್ರಿ ನಡೆದಿದೆ ಎನ್ನಲಾದ ಘಟನೆ ಇಂದು (ಮಂಗಳವಾರ) ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ಹಿನ್ನಲೆ ಜೋಡಿ ಕೊಲೆ ಎನ್ನಲಾಗಿದೆಯಾದರೂ ಸಹ ಕೊಲೆ ಯಾರು ಮಾಡಿದರು? ಕೊಲೆಗೆ ನಿಖರ ಕಾರಣ ಏನು ಅಂತ ಇನ್ನೂ ತಿಳಿದು ಬಂದಿಲ್ಲ.

ಈ ಸುದ್ದಿ ಓದಿದ್ದೀರಾ? : ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿಗೆ ಲೈಂಗಿಕ ಕಿರುಕುಳ: FIR ದಾಖಲು

ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಂತರವಷ್ಟೇ ಪ್ರಕರಣದ ನೈಜತೆ ಬೆಳಕಿಗೆ ಬರಲಿದೆ.

RELATED ARTICLES

Related Articles

TRENDING ARTICLES