Friday, May 10, 2024

ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಆರ್ ಚಂದ್ರು ಹುಟ್ಟುಹಬ್ಬ ಆಚರಣೆ

ಬೆಂಗಳೂರು: ಕ್ರಿಯೇಟಿವ್ ಫೀಲ್ಡ್​ನಲ್ಲಿ ತಮ್ಮ ಕನಸು ನನಸು ಮಾಡಿಕೊಂಡ ಟ್ಯಾಲೆಂಟೆಡ್​​ ಡೈರೆಕ್ಟರ್ ಅಂತಾ ಬ್ರಾಂಡ್ ಆಗಿರುವ ನಿರ್ದೇಶಕ ಆರ್ ಚಂದ್ರು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಅಭಿಮಾನಿಗಳು ಮತ್ತು ಆಪ್ತರು ಸಾಮಾಜಿಕ ಕಾರ್ಯಕ್ರಮಗಳ‌ ಮೂಲಕ ಆಚರಿಸಲು ಸಜ್ಜಾಗಿದ್ದಾರೆ.

ಕೇಶಾವರ ಎಂಬ ಹಳ್ಳಿಯಿಂದ ಬಂದ ರೈತನ ಮಗ ಆರ್ ಚಂದ್ರು ಅವರು ಮೊದಲ ಚಿತ್ರ “ತಾಜ್ ಮಹಲ್” ನಿಂದ ರಾಜ್ಯಾದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು. “ಕಬ್ಜ” ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಈಗ ದೇಶದೆಲ್ಲೆಡೆ ಮನೆ ಮಾತಾಗಿದ್ದಾರೆ. ತಮ್ಮ ಸರಳತೆ ಹಾಗೂ ಸಜ್ಜನಿಕೆಗೆ ಹೆಸರಾದ ಆರ್ ಚಂದ್ರು ಅವರು ಸದಾ ಜನರೊಂದಿಗೆ ಬೆರೆಯುವವರು.

ರಾಜ್ಯಾದ್ಯಂತ ಇರುವ ಆರ್ ಚಂದ್ರು ಅಭಿಮಾನಿಗಳು, “ಮೈಲಾರಿ” ಆರ್ ಚಂದ್ರು ಅಭಿಮಾನಿಗಳು, ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು ಸೇರಿ ಲ್ಲೆಡೆ ಆರ್ ಚಂದ್ರು ಅವರನ್ನು ಪ್ರೀತಿಸುವ ಸಾವಿರಾರು ಬೃಹತ್ ಅಭಿಮಾನಿಗಳ ಸಂಘ ಸ್ಥಾಪನೆಗೆ ಮುಂದಾಗಿದ್ದು, “ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ” ವನ್ನು ಆರಂಭಿಸಲಿದ್ದಾರೆ.

ಫೆಬ್ರವರಿ 7 ರಂದು ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು ಅವರ ಹುಟ್ಟುಹಬ್ಬ. ಅಂದು ಬೆಳಗ್ಗೆ ಆರ್ ಚಂದ್ರು ಅವರ ಅಭಿಮಾನಿಗಳ ಸಂಘದ ವತಿಯಿಂದ ಆರ್ ಚಂದ್ರು ಅವರ ನಿವಾಸದ ಬಳಿ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಹಲವು ಸಮಾಜಿಕ ಕಾರ್ಯಕ್ರಮಗಳೊಂದಿಗೆ “ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ”ಕ್ಕೂ ಚಾಲನೆ ಸಿಗಲಿದ್ದು, ಚಂದ್ರು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ದವಾಗಿದ್ದಾರೆ.

ಆರ್ ಚಂದ್ರು ಅವರು 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಿಸಿದ ಬೆನ್ನಲ್ಲೇ ಅವರ ಅಭಿಮಾನಿಗಳು ಶಕ್ತಿಯಾಗಿ ನಿಂತಿದ್ದು, ಸಾಮಾಜಿಕ ಜಾಲತಾಣದಲ್ಲೂ ಸಹ ಭಾರಿ ಬೆಂಬಲ ಸಿಕ್ಕಿದೆ. “ಕಬ್ಜ” ಯಶಸ್ಸಿನ ನಂತರ ಮುಂದಿನ ಸಿನಿಮಾ ಘೋಷಣೆಗೆ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್ ಚಂದ್ರು ಅವರು, ಒಮ್ಮೆಲೆ 5 ಸಿನಿಮಾಗಳ ಘೋಷಣೆ ಮತ್ತು ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ಪ್ಯಾನ್ ಇಂಡಿಯಾ ಸಂಸ್ಥೆ ನಿರ್ಮಾಣ ಮಾಡಿದ್ದಾರೆ. ಇದು ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ.

ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು, ರೈತಾಪಿ ಜನರು, ಆಪ್ತವಲಯ ಮತ್ತು ಮಾಧ್ಯಮದ ಭಾರಿ ಬೆಂಬಲ ಅವರಿಗೆ ಎಂದಿನಂತೆ ಇದ್ದು, ಇವರು ಮುಟ್ಟಿದ್ದೆಲ್ಲ ಚಿನ್ನವಾಗಲಿ. ಆರ್ ಚಂದ್ರು ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಕನ್ನಡಿಗರ ಆಶಯ.

RELATED ARTICLES

Related Articles

TRENDING ARTICLES