Friday, May 10, 2024

ರಾಜ್ಯದಲ್ಲಿ ರೂಪಾಂತರ ತಳಿ ಕೊರೊನಾಗೆ ಮೊದಲ ಬಲಿ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಒಬ್ಬರು ಡಿ. 14 ರಂದು ಮೃತಪಟ್ಟಿದ್ದಾರೆ. ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರ ಜತೆ ರಾಜ್ಯ ಆರೋಗ್ಯ ಸಚಿವರ ಸಭೆ ನಡೆದಿದ್ದು, ಕೆಲವೊಂದು ಮಹತ್ವದ ಅಂಶಗಳನ್ನು ಚರ್ಚೆ ಮಾಡಲಾಗಿದೆ ಎಂದರು.

ವಿಕಾಸಸೌಧದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್‌ ಭಾದಿತರಾಗಿದ್ದ 64 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ. ಅವರು ಚಾಮರಾಜನಗರ ನಿವಾಸಿಯಾಗಿದ್ದರು. ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಆ ವ್ಯಕ್ತಿಯು ಟಿಬಿ, ಹೃದಯ ಸಮಸ್ಯೆ ಹಾಗೂ ಅಸ್ತಮಾಗಳಿಂದ ಬಳಲುತ್ತಿದ್ದರು. ಅವರಿಗೆ ಲಂಗ್‌ ಡಿಸೀಸ್‌ ಇತ್ತು. ಅವರು ಹಾರ್ಟ್‌ ಫೈಲ್ಯೂರ್‌ನಿಂದ ಮೃತಪಟ್ಟಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಇದನ್ನೂ ಓದಿ: ಕೊರೋನಾ ಬಂದ್ರೆ 10 ದಿನ ಹೋಂ ಕ್ವಾರಂಟೈನ್​: ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​

ಮೃತಪಟ್ಟ ವ್ಯಕ್ತಿಗೆ JN1 ಇತ್ತೇ ಎಂಬುದುರ ಬಗ್ಗೆ ಖಚಿತಪಡಿಸಿಕೊಳ್ಳಲು ಜಿನೋಮಿಕ್ ಸಿಕ್ವೆನ್ಸ್ ಟೆಸ್ಟ್‌ಗೆ ಕಳುಹಿಸಲಾಗುತ್ತದೆ. ಟೆಸ್ಟಿಂಗ್ ವಸ್ತುಗಳ ಅಭಾವ ಇದೆ. ಅದನ್ನು ಒದಗಿಸಲಾಗುತ್ತದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಸದ್ಯಕ್ಕೆ ಕರ್ನಾಟಕದಲ್ಲಿ ಪ್ಯಾನಿಕ್ ಆಗುವಂತಹ ಪರಿಸ್ಥಿತಿ ಇಲ್ಲ. ನಾವು ಕೋವಿಡ್ ಟೆಸ್ಟಿಂಗ್‌ಗಳನ್ನು ಹೆಚ್ಚು ಮಾಡುತ್ತಿದ್ದೇವೆ. ಐಸಿಯು ಬೆಡ್, ವೆಂಟಿಲೇಟರ್ಸ್, ಆಕ್ಷಿಜನ್ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಂಡಿದ್ದೇವೆ. ಈಗಾಗಲೇ ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಾಗ ಕೇಂದ್ರದ ನೆರವನ್ನು ಕೋರಲಾಗುವುದು. ಆಗ ಸಹಕಾರ ನೀಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ಸಿದ್ಧತೆ, ಜಿನೋಮಿಕ್ ಸೀಕ್ವೆನ್ಸ್ ಬಗ್ಗೆ ಮಾಹಿತಿ ನೀಡಿದರು. ಆಕ್ಸಿಜನ್ ಸಿದ್ಧತೆ, ಬೆಡ್‌ಗಳ ವ್ಯವಸ್ಥೆಗಳ ಬಗ್ಗೆ ಈ ವೇಳೆ ಚರ್ಚೆ ನಡೆದಿದೆ. ಕೇರಳ‌ ಹಾಗೂ ಕರ್ನಾಟಕ ಗಡಿಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳೇನು? ಕೇರಳದಿಂದ ಬಂದವರಿಗೆ ಟೆಸ್ಟಿಂಗ್ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿಯನ್ನು ನೀಡಿದರು.

ದೇಶದಲ್ಲಿ ಒಟ್ಟು 20 Jn1 ಕೇಸ್‌ಗಳು ಪತ್ತೆ

ದೇಶದ ಹಲವು ಕಡೆ Jn1 ವೈರಸ್ ಪತ್ತೆಯಾಗಿದೆ. ಗೋವಾದಲ್ಲಿ 18, ಕೇರಳದಲ್ಲಿ 1 ಹಾಗೂ ಮಹಾರಾಷ್ಟ್ರದಲ್ಲಿ 1 ಕೇಸ್ ಪತ್ತೆಯಾಗಿದೆ. ದೇಶದಲ್ಲಿ ಒಟ್ಟು 20 Jn1 ಕೇಸ್‌ಗಳು ಪತ್ತೆಯಾಗಿವೆ. ನಮ್ಮ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಪ್ರಕ್ರಿಯೆ ಆರಂಭವಾಗಿದೆ. ನಿನ್ನೆ 772 ಟೆಸ್ಟಿಂಗ್ ಮಾಡಿದ್ದೇವೆ. ನಾಳೆಯಿಂದ 5 ಸಾವಿರ ಕೋವಿಡ್ ಟೆಸ್ಟ್ ಮಾಡುತ್ತೇವೆ. ಸಾರಿ ಕೇಸ್‌ಗಳು ಬಂದಲ್ಲಿ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಟೆಸ್ ಮಾಡುತ್ತೇವೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

 

 

 

 

RELATED ARTICLES

Related Articles

TRENDING ARTICLES