Thursday, May 9, 2024

BBK 10 : ಈ ವಾರ ಬೆಸ್ಟ್ ಪರ್ಫಾಮರ್ ಡ್ರೋನ್ ಪ್ರತಾಪ್​ : ನೀತು, ಇಶಾನಿಗೆ ಕಳಪೆ ಪಟ್ಟ

ಬೆಂಗಳೂರು: ಇದೇ ಮೊದಲ ಬಾರಿಗೆ ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಏಕಕಾಲಕ್ಕೆ ಇಬ್ಬರು ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿರುವ ಘಟನೆ ದೋಡ್ಮನೆಯಲ್ಲಿ ನಡೆದಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10ರ ಐದನೇ ವಾರದ ಬೆಸ್ಟ್ ಪರ್ಫಾಮರ್ ಆಗಿ ಡ್ರೋನ್ ಪ್ರತಾಪ್ ಆಯ್ಕೆಯಾಗಿದ್ದಾರೆ. ಇನ್ನೂ ಕಳಪೆ ಪಟ್ಟ ಇಶಾನಿ ಮತ್ತು ನೀತು ಪಾಲಾಗಿದ್ದು,ಇಬ್ಬರೂ ಜೈಲಿಗೆ ಒಟ್ಟಿಗೆ ತೆರಳಿದ್ದಾರೆ.

ಗಂಧದ ಗುಡಿ ತಂಡದ ಕ್ಯಾಪ್ಟನ್ ಆಗಿದ ಡ್ರೋನ್ ಪ್ರತಾಪ್‌ ತಂಡವನ್ನ ಒಗ್ಗೂಡಿಸಿದ ರೀತಿ, ನಾಮಿನೇಷನ್ ಅಸ್ತ್ರವನ್ನ ಬಳಸಿದ ರೀತಿ, ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್‌ ಫೇರ್‌ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್ ಅವರಿಗೆ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಲಭಿಸಿದೆ.

ಡ್ರೋನ್ ಪ್ರತಾಪ್‌ಗೆ ಸ್ನೇಹಿತ್, ಕಾರ್ತಿಕ್, ವರ್ತೂರು ಸಂತೋಷ್, ನೀತು, ಮೈಕಲ್ ವೋಟ್‌ ಹಾಕಿದರು. ಅತಿ ಹೆಚ್ಚು ಮತಗಳನ್ನ ಪಡೆದ ಡ್ರೋನ್ ಪ್ರತಾಪ್ ‘ಉತ್ತಮ’ ಪಟ್ಟ ಪಡೆದರು.

ತಲಾ ಏಳು ಮತಗಳನ್ನು ಪಡೆದ ನೀತು ಮತ್ತು ಇಶಾನಿ ಒಟ್ಟಿಗೆ ಜೈಲಿಗೆ ತೆರಳಿದ್ದಾರೆ .

‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್​ನ್ನು ಅವರ  ‘’ಅಪ್ಪ, ಅಮ್ಮ, ತಂಗಿ, ತಾತನಿಗೆ ಡೆಡಿಕೇಟ್ ಮಾಡ್ತೀನಿ. ಸುದೀಪ್‌ ಸರ್‌ಗೆ ಬಿಗ್ ಥ್ಯಾಂಕ್ಸ್. ನನ್ನಲ್ಲಿ ಅವರು ಹೊಸ ಚೈತನ್ಯ ತಂದರು. ಮುಂದೆ ಚೆನ್ನಾಗಿ ಟಾಸ್ಕ್‌ನಲ್ಲಿ ಪರ್ಫಾಮ್‌ ಮಾಡ್ತೀನಿ’’ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.

ಈ ವಾರ ಮನೆಗೆ ಹೋಗುವವರು ಯಾರು..? 

ಮನೆಯಿಂದ ಹೊರಗೆ ಹೋಗಲು ಈ ವಾರ ನಮ್ರತಾ, ಸ್ನೇಹಿತ್, ತುಕಾಲಿ ಸಂತು, ವರ್ತೂರು ಸಂತೋಷ್, ನೀತು, ಇಶಾನಿ ಮತ್ತು ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಈ 7 ಮಂದಿ ಪೈಕಿ ಯಾರು ಮನೆ ಸೇರಲಿದ್ದಾರೆ ಎಂದು ಈ ವಾರದ ಕಿಚ್ಚ ಸುದೀಪ್​ ಪಂಜಾಯಿತಿಯವರೆಗೂ ಕಾದು ನೋಡಬೇಕಿದೆ.

 

 

 

 

RELATED ARTICLES

Related Articles

TRENDING ARTICLES