Wednesday, October 2, 2024

ಬೆಂಗಳೂರಿನಲ್ಲಿ ಖರ್ತನಾಕ್ ಬೈಕ್ ಕಳ್ಳರು ಅಂದರ್

ಬೆಂಗಳೂಕಸ್ಟಮರ್​ಗಳಿಗೆ ಯಾವ ಬೈಕ್ ಬೇಕು ಎಂದು ಆರ್ಡರ್ ಪಡೆದು ಅದೇ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಬೈಕ್ ಕಳ್ಳರನ್ನು ಪರಪ್ಪನ ಅಗ್ರಹಾರ ಪೋಲಿಸರು ಬಂಧಿಸಿದ್ದು ಆರೋಪಿಗಳಾದ ಶಬಾಜ್ ಖಾನ್ ಹಾಗೂ ಓಂ ಬಂಧಿತ ಆರೋಪಿಗಳು.

ಆನ್​ಲೈನ್ ಅಲ್ಲಿ ಪರಿಚಯಯವಾಗಿ ಗೆಳೆಯರಾಗಿದ್ದ ಆರೋಪಿಗಳು. 15 ರಿಂದ 20 ಸಾವಿರಕ್ಕೆ ಬೈಕ್​ಗಳನ್ನು ಮಾರಾಟ ಮಾಡುತ್ತಿದ್ದರು. ಮಾರಾಟದ ವೇಳೆ ಯಾರಿಗಾದರು ಕಡಿಮೆ ಬೆಲೆಗೆ ಬೈಕ್ ಬೇಕಿದ್ದರೆ  ಕೇಳಿ , ಯಾವ್ ಬೈಕ್​ಗಳಾದರು ನೀಡುತ್ತೇವೆ ಎಂದು ಹೇಳುತ್ತಿದ್ದರು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ .

ಕಸ್ಟಮರ್ ಯಾವ ಬೈಕ್ ಬೇಕು ಎಂದು ಕೇಳುತ್ತಿದ್ದರೊ ಅದೇ ಬೈಕ್​ಗಳನ್ನುಆರೋಪಿಗಳು ಕದ್ದು ಮಾರಾಟ ಮಾಡುತ್ತಿದ್ದರು. ಬೈಕ್​ಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿತಿದ್ದ ಆರೋಪಿಗಳು . ಮಾರಾಟದಿಂದ ಬಂದ ಹಣದಿಂದ ವಿಲಾಸಿ ಜೀವನವನ್ನು ನಡೆಸುತ್ತಿದ್ದರು.

ಬಂಧಿತ ಆರೋಪಿಗಳಿಂದ 12.5 ಲಕ್ಷ ಮೌಲ್ಯದ 13 ಬೈಕ್​ಗಳನ್ನು ವಶಪಡಿಸಿಕೊಂಡಿರುವ ಪೋಲಿಸರು. ಆರೋಪಿಗಳನ್ನು ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ .

 

RELATED ARTICLES

Related Articles

TRENDING ARTICLES