Sunday, October 6, 2024

ಮೂಡ ನಿವೇಶನಗಳನ್ನು ವಾಪಾಸ್ ಕೊಡುವುದಾಗಿ ಪತ್ರ ಬರೆದ ಸಿಎಂ ಪತ್ನಿ

ಬೆಂಗಳೂರು: 14 ಸೈಟ್​ಗಳನ್ನು ವಾಪಸ್ ಕೊಡುವುದಾಗಿ ಮುಡಾ ಆಯುಕ್ತರಿಗೆ ಸಿಎಂ ಪತ್ನಿ ಬಹಿರಂಗ ಪತ್ರ ಬರೆದಿದ್ದಾರೆ. ನನ್ನ ಪತಿ ಸಿದ್ದರಾಮಯ್ಯ ನೈತಿಕತೆಯನ್ನೇ ತಮ್ಮ ಜೀವನದ ವ್ರತವನ್ನಾಗಿಸಿ ಪಾಲಿಸಿಕೊಂಡು ಬಂದಿದ್ದಾರೆ. ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ಯಾವುದು ದೊಡ್ಡದಲ್ಲ ಎಂದು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ನಾನೆಂದು ಮನೆ , ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ.  ಮೂಡ ನಿವೇಶನದ ಬಗ್ಗೆ ಕೇಳೀಬಂದ ಆರೋಪಗಳಿಂದ ನನ್ನ ಮನಸಿಗೆ ಘಾಸಿಯಾಗಿದೆ. ನನ್ನ ಪತಿಯ ಗೌರವಕ್ಕಿಂತ ಯಾವುದು ದೊಡ್ಡದಲ್ಲ. ನನಗೆ ನನ್ನ ಕುಟುಂಬಕ್ಕೆ ಈ ನಿವೇಶನಗಳು ತೃಣಕ್ಕೆ ಸಮ ಎಂದು ತಮ್ಮ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ನಿವೇಶನ ಹಿಂದಿರುಗಿಸಲು ನಿರ್ಧರಿಸಿದ್ದೇನೆ. ನಿಮ್ಮ ರಾಜಕೀಯ ದ್ವೇಶಕ್ಕಾಗಿ ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ , ಗೌರವಕ್ಕೆ ಹಾನಿ ಮಾಡಬೇಡಿ. ಎಂದು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES