ಬೆಂಗಳೂರು : ರಾಜ್ಯ ಬಿಜೆಪಿ ಕಛೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಸುನೀಲ್ ಕುಮಾರ್ ಬಿಜೆಪಿಯ ಮೊದಲ ಹಂತದ ಸದಸ್ಯತ್ವ ಅಭಿಯಾನ ಮುಕ್ತಾಯಗೊಂಡಿದ್ದು. ನಾಳೆಯಿಂದ (ಅ.01) ಎರಡನೇ ಹಂತದ ಅಭಿಯಾನಕ್ಕೆ ಸಿದ್ದತೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಯ ಮೊದಲ ಹಂತದ ಸದಸ್ಯತ್ವ ಅಭಿಯಾನದಲ್ಲಿ40 ಲಕ್ಷ ಜನರ ಮೆಂಬರ್ಶಿಪ್ ಗುರಿಯನ್ನು ಮುಟ್ಟಿದ್ದು. ಎರಡನೇ ಹಂತದ ಸದಸ್ಯತ್ವಕ್ಕೆ ಅಕ್ಟೋಬರ್ 01ರಿಂದ ಚಾಲನೆ ಸಿಗಲಿದೆ. ಅಕ್ಟೋಬರ್ 3ರಂದು ಸದಸ್ಯತ್ವ ಅಭಿಯಾನ ಪರಿಶೀಲನ ಸಭೆ ನಡೆಸುತ್ತೇವೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಸದಸ್ಯತ್ವ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.
ಅಕ್ಟೋಬರ್ 5 ಮತ್ತು 6ರಂದು ಕರ್ನಾಟಕದ ಎಲ್ಲಾ ಬೂತ್ಗಳಲ್ಲಿ ಏಕಕಾಲದಲ್ಲಿ ಅಭಿಯಾನಕ್ಕೆ ವೇಗವನ್ನು ಕೊಡುತ್ತೇವೆ. ಕರ್ನಾಟಕದಲ್ಲಿಯೆ ಒಂದೂವರೆ ಕೋಟಿ ಸದಸ್ಯರನ್ನು ಹೊಂದುವ ಗುರಿಯನ್ನು ಹೊಂದಿದ್ದೇವೆ. ಯೋಜನೆಗೆ ತಕ್ಕಂತೆ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಅಭಿಯಾನ ಸಾಗಲಿದೆ ಎಂದು ಹೇಳಿದರು.