Sunday, October 6, 2024

ಬೀದಿ ನಾಯಿಗಳ ಹಾವಳಿಯಿಂದ ರೋಸಿಹೋದ ಹೊಸಪೇಟೆ ಜನ ; ನಗರಸಭೆಗೆ ಹಿಡಿಶಾಪ

ವಿಜಯ ನಗರ : ನಗರ ಸಭೆ ನಿರ್ಲಕ್ಷಕ್ಕೆ ಹೊಸಪೇಟೆ ನಿವಾಸಿಗಳು ಪ್ರತಿದಿನ ಒಂದಿಲ್ಲ ಒಂದು ಸಮಸ್ಯೆಗೆ ಗುರಿಯಾಗಿತ್ತಿದ್ದು. ಇದೀಗ 8 ವರ್ಷದ ಆಯನ್ ಎಂಬ ಬಾಲಕ ಬೀದಿ ನಾಯಿಯ ದಾಳಿಯಲ್ಲಿ ಗಾಯಗೊಂಡಿದ್ದಾನೆ.

ವಿಜಯ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು. ನಗರಸಭೆಯು ಬೀದಿ ನಾಯಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.  ಇದರಿಂದಾಗಿ ಪ್ರತಿದಿನವು ಒಂದಿಲ್ಲ ಒಂದು ಕಡೆ ಸಾರ್ವಜನಿಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡತ್ತಿವೆ.  ಇದೇ ರೀತಿಯಲ್ಲಿ ಹೊಸಪೇಟೆಯ ಚಿತ್ತಡವಾಡ್ಗಿ ಪ್ರದೇಶದಲ್ಲಿ ನಾಯಿ ದಾಳಿ ಮುಂದುವರಿದಿದ್ದು ಈ ದಾಳಿಯಲ್ಲಿ ಆಯನ್ ಎಂಬ 8 ವರ್ಷದ ಬಾಲಕನಿಗೆ ಗಾಯವಾಗಿದೆ.

ನಾಯಿ ದಾಳಿಯಲ್ಲಿ ಬಾಲಕನ ಕಾಲಿಗೆ ಬಲವಾದ ಗಾಯವಾಗಿದ್ದು. ಬಾಲಕನ ಕಾಲು ರಕ್ತಸಿಕ್ತವಾಗಿದೆ.  ನಾಯಿ ದಾಳಿಯಿಂದ ರೋಸಿ ಹೋಗಿರುವ ಸಾರ್ವಜನಿಕರು  ಬೀದಿ ನಾಯಿಗಳ ಬಗ್ಗೆ ನಿರ್ಲಕ್ಷ ತೋರುತ್ತಿರುವ ಹೊಸಪೇಟೆ ನಗರ ಸಭೆ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

RELATED ARTICLES

Related Articles

TRENDING ARTICLES