ಧಾರವಾಡ : ಬಸ್ನ ಮುಂದಿನ ಚಕ್ರ ಏಕಾಏಕಿ ಕಳಚಿ ಬಿದ್ದ ಸ್ವಲ್ಪದರಲ್ಲಿಯೇ ಭಾರೀ ಅನಾಹುತವೊಂದು ತಪ್ಪಿದೆ.
ಧಾರವಾಡ ಕಡೆಯಿಂದ ನವಲಗುಂದಕ್ಕೆ ಹೊರಟಿದ್ದ ಬಸ್ನಲ್ಲಿ ಈ ಅವಘಡ ಸಂಭವಿಸಿದ್ದು, ಜಿಲ್ಲೆಯ ನವಲಗುಂದ ತಾಲ್ಲೂಕಿನ ನವಲಗುಂದ ಘಟಕಕ್ಕೆ ಸೇರಿದ ಸಾರಿಗೆ ಬಸ್ ಆಗಿದ್ದು. ಚಲಿಸುತ್ತಿದ್ದ ಬಸ್ನ ಮುಂದಿನ ಚಕ್ರ ಕಳಚಿದೆ. ತಕ್ಷಣ ಎಚ್ಚೆತ್ತ ಚಾಲಕ ಶರೀಫ್ ಹಂಚಿನಾಳ ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ರಸ್ತೆ ಪಕ್ಕ ನಿಲ್ಲಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ನೆನ್ನೆ (ಸೆ.30) ಮಂಡ್ಯದಲ್ಲಿ ಚಲಿಸುತ್ತಿದ್ದ KSRTC ಬಸ್ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿಯೇ ಉರುಳಿ ಬಿದ್ದು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದು ಮಾಸುವ ಮುನ್ನ ಈ ಘಟನೆ ನಡೆದಿರುವು ಆಘಾತಕ್ಕೆ ಕಾರಣವಾಗಿದೆ