ಕೋಲಾರ : ನಗರದ ಜಂಗಾಲಹಳ್ಳಿ ಗ್ರಾಮದಲ್ಲಿ ಹೆಜ್ಜೇನು ದಾಳಿಯಾಗಿದ್ದು.ಪಿತೃಪಕ್ಷ ಹಿನ್ನಲೆಯಲ್ಲಿ ಸ್ಮಶಾನದಲ್ಲಿ ಪೂಜೆ ಮಾಡುವ ವೇಳೆ ಈ ದಾಳಿಯಾಗಿದ್ದು. ಈ ದಾಳಿಯಲ್ಲಿ 60 ವರ್ಷದ ವೆಂಕಟಸ್ವಾಮಿ ಎಂಬ ವ್ಯಕ್ತಿ ಮರಣ ಹೊಂದಿದ್ದು ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಪಿತೃಪಕ್ಷದ ಹಿನ್ನಲೆಯಲ್ಲಿ ಜಂಗನಹಳ್ಳಿ ರುದ್ರಭೂಮಿಯಲ್ಲಿ ಪೂಜೆ ಸಲ್ಲಿಸುವಾಗ ಈ ಘಟನೆ ನಡೆದಿದೆ. ಕುಟುಂಬದ ಹಿರಿಯರ ಸಮಾಧಿಗಳಿಗೆ ಪೂಜೆ ಸಲ್ಲಿಸುವಾಗ ಊದು ಬತ್ತಿ ಹಚ್ಚಿದ್ದರಿಂದ ಊದು ಬತ್ತಿಯ ಹೊಗೆಯಿಂದ ರೊಚ್ಚಿಗೆದ್ದ ಹೆಜ್ಜೇನು ಅಲ್ಲಿ ನೆರೆದಿದ್ದ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿವೆ.
ಈ ದಾಳಿಯಲ್ಲಿ 4 ಜನರಿಗೆ ತೀವ್ರ ಗಾಯವಾಗಿದ್ದು. ಗಾಯಾಳುಗಳು ಕಾರ್ತೀಕ್ (33), ವೆಂಕಟಗಿರಿಯಪ್ಪ (55), ಶ್ರೀ ನಿವಾಸ್ (55), ಶ್ಯಾಮಣ್ಣ (75) ಇವರನ್ನು ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.