ಭಾರತ ಮತ್ತು ಬಾಂಗ್ಲಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಬೀಗಿದೆ. ಮಳೆಯಿಂದ ರದ್ದಾಗಬಹುದೆಂಬ ಆತಂಕದಲ್ಲಿದ್ದ ಭಾರತ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದು ಬೀಗಿದೆ. ಎರಡನೇ ಇನಿಂಗ್ಸ್ನಲ್ಲಿ 95 ರನ್ಗಳ ಗುರಿ ಬೆನ್ನಟ್ಟಿದ ಭಾರತವು ಸರಣಿಯನ್ನು ಮುಡಿಗೇರಿಸಿಕೊಂಡಿದೆ.
ಮೊದಲ ಇನಿಂಗ್ಸ್ನಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಬಾಂಗ್ಲಾ ತಂಡ 233 ರನ್ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ಕೇವಲ 34.4 ಓವರ್ಗಳಿಗೆ 285 ರನ್ ಕಲೆ ಹಾಕಿದ ಭಾರತ ತಂಡ ಡಿಕ್ಲೇರ್ ಘೋಶಿಸಿತು. ಭಾರತದ ಪರ ಯಶಸ್ವಿ ಜೈಸ್ವಾಲ್ (72) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಎರಡನೇ ಇನಿಂಗ್ಸ್ನಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ ತಂಡದ ಆಟಗಾರರು ಪೆವಿಲಿಯನ್ ಪೇರೆಡ್ ಮಾಡತೊಡಗಿದರು. ಕೆಲ ಕಾಲ ಮುಷ್ಫಿಕರ್ ರೆಹಮಾನ್ (37) ಪ್ರತಿರೋದ ತೋರಿಸಿದರು ಕೂಡ 146 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಕೇವಲ 95 ರನ್ಗಳ ಗುರಿ ಬೆನ್ನತ್ತಿದ ಭಾರತ 17.2 ಓವರ್ಗಳಲ್ಲಿ ಗುರಿಯನ್ನು ಮುಟ್ಟಿ ಜಯಗಳಿಸಿತು. ಎರಡನೇ ಇನಿಂಗ್ಸ್ನಲ್ಲಿಯೂ ಭಾರತದ ಪರ ಯಶಸ್ವಿ ಜೈಸ್ವಾಲ್ (51) ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿರಾಟ್ ಕೊಹ್ಲಿ ಅಜೇಯ 29 ರನ್ಗಳಿಸಿದರು.
ಭಾರತದ ಪರ ಅಧ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರ , ಅಶ್ವಿನ್ , ಜಡೇಜ ತಲಾ 3 ವಿಕೆಟ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.