Thursday, May 9, 2024

ಪತ್ನಿ ಮೇಲೆ ಸಂಶಯ: ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಆಯಕಟ್ಟಿನ ಗ್ರಾಮದಲ್ಲಿ ಪತ್ನಿಯ ಮೇಲೆ ಸಂಶಯಗೊಂಡ ಪತಿ ತನ್ನ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.

ಮಲ್ಲವ್ವ ಬಳ್ಳೂರ ಮೃತ ದುರ್ದೈವಿ. ಶಿವಪ್ಪ ಬಳ್ಳೂರ ಎಂಬಾತ ಪತ್ನಿ ಕೊಂದವನು. 15 ವರ್ಷವಾದರೂ ಶಿವಪ್ಪ ನಿತ್ಯ ಪತ್ನಿ ಮೇಲೆ ಸಂಶಯ ಪಡುತ್ತಿದ್ದ. ಶುಕ್ರವಾರ ರಾತ್ರಿಯಿಡೀ ಜಗಳ ಮಾಡಿ ಬೆಳಗ್ಗೆ ಸಿಟ್ಟಿನಲ್ಲಿ ಪತ್ನಿಯನ್ನು ಮಲ್ಲವ್ವನನ್ನು ಕೊಂದು ಮನೆಯಲ್ಲಿಯೇ ಇದ್ದ.

ಇದನ್ನೂ ಓದಿ: ಲಾರಿ ಬೈಕ್​ ನಡುವೆ ಭೀಕರ ಅಪಘಾತ: ಪತಿ ಸಾವು ಪತ್ನಿಗೆ ಗಾಯ

ಅಕ್ಕ-ಪಕ್ಕದ ಮನೆಯವರು ಬಂದು ನೋಡಿದಾಗ ರಕ್ತಸಿಕ್ತವಾಗಿ ಬಿದ್ದಿದ್ದ ಮಲ್ಲವ್ವಳನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಯಾದ ಜಾಗದಲ್ಲೇ ಕುಳಿತಿದ್ದ ಶಿವಪ್ಪನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES