Monday, May 20, 2024

ಮೆಡಿಕಲ್​ ಕಾಲೇಜು ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ

ಮಂಗಳೂರು: ಮಂಗಳೂರು ಮೆಡಿಕಲ್​ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್​​ ಇಟ್ಟು ಚಿತ್ರೀಕರಣ ಮಾಡಿದ  ಪ್ರಕರಣಕ್ಕೆ ಸಂಬಂಧಿಸಿ ಓರ್ವ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಮೆಡಿಕಲ್​ ಕಾಲೇಜಿನಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ 17 ವರ್ಷದ ಬಾಲಕ, ಮಹಿಳೆಯರ ಟಾಯ್ಲೆಟ್​ನಲ್ಲಿ ಮೊಬೈಲ್​ ಇಟ್ಟು ಹೊರಗಡೆ ಸುತ್ತಾಡಲು ಹೋಗಿದ್ದ, ಈ ವೇಳೆ ಟಾಯ್ಲೆಟ್​ನಲ್ಲಿಟ್ಟಿದ್ದ ಫೋನಿಗೆ ಕರೆಯೊಂದು ಬಂದ ಹಿನ್ನೆಲೆ ಫೋನ್​ ರಿಂಗ್​ ಆಗಿದೆ. ಈ ಬಗ್ಗೆ ದೂರು ಬಂದ ಕೂಡಲೇ ಕಾಲೇಜು ಸೆಕ್ಯೂರಿಟಿ ಸಿಬ್ಬಂದಿ ಮೊಬೈಲ್​ ತೆಗೆದು ಪರಿಶೀಲಿಸಿದ್ದಾರೆ. ಈ ವೇಳೆ ಕಾಲೇಜಿನ ಶೌಚಾಲಯಕ್ಕೆ ಮಹಿಳೆಯೊಬ್ಬರ ಬಂದು ಹೋಗುವ ಸುಮಾರು 6 ನಿಮಿಷಗಳ ಅಸ್ಪಷ್ಟ ಚಿತ್ರಣ ದಾಖಲಾಗಿದೆ.

ಇದನ್ನೂ ಓದಿ: HDK ಹಿಟ್‌ ಅಂಡ್‌ ರನ್‌ ಗಿರಾಕಿ ಅನ್ನೋದು ಗೊತ್ತಿದೆ: ಡಿಕೆ ಶಿವಕುಮಾರ್​

ಮೊಬೈಲ್ ಸಿಕ್ಕ ಬಳಿಕ ಕಾಲೇಜು ಸಿಬ್ಬಂದಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾಲೇಜಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹದಿನೇಳು ವರ್ಷದ ಅಪ್ರಾಪ್ತ ಯುವಕನನ್ನು ಬಂಧಿಸಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

RELATED ARTICLES

Related Articles

TRENDING ARTICLES