Thursday, May 9, 2024

ಲಾರಿ ಬೈಕ್​ ನಡುವೆ ಭೀಕರ ಅಪಘಾತ: ಪತಿ ಸಾವು ಪತ್ನಿಗೆ ಗಾಯ

ಕಲಬುರ್ಗಿ : ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದು ಪತ್ನಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಢೋಗಿ ನಾಲಾ ಬಳಿ ನಡೆದಿದೆ.

ಇದನ್ನೂ ಓದಿ: 95 ಮಕ್ಕಳ ಅಕ್ರಮ ಸಾಗಾಟ: ಮಕ್ಕಳ ಆಯೋಗದಿಂದ ರಕ್ಷಣೆ

ಮೃತರನ್ನು ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದ ನಿವಾಸಿ ಅರ್ಜುನ್ ಎಂದು ತಿಳಿದು ಬಂದಿದೆ, ಘಟನೆಯಲ್ಲಿ ಪತಿ ಸಾವಿಗೀಡಾಗಿದ್ದು ಪತ್ನಿಗೆ ಗಂಭೀರವಾಗಿ ಗಾಯಗಳಾಗಿದೆ. ದಂಪತಿಗಳಿಬ್ಬರು ಪುಣೆಯಿಂದ ಯಾದಗಿರಿಗೆ ಬೈಕ್​ ಮೂಲಕ ಹೊರಟಿದ್ದರು. ಈ ನಡುವೆ ಕಲಬುರ್ಗಿ ಜಿಲ್ಲೆಯ ಆಳಂದ ಬಳಿ ವೇಗವಾಗಿ ಬಂದ ಲಾರಿ ಬೈಕ್​ಗೆ ಗುದ್ದಿದೆ ಗುದ್ದಿದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ನರೋಣ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.​

RELATED ARTICLES

Related Articles

TRENDING ARTICLES