Monday, May 20, 2024

ರಾಜಮಾತಂಗಿ ಆರಾಧನೆ ಹೇಗೆ? : ಮಾತಂಗಿಯನ್ನು ಪೂಜಿಸಬಹುದೇ? ಅಥವಾ ಬೇಡವೇ?

ಬೆಂಗಳೂರು : ಯಶಸ್ಸು ಮತ್ತು ಜನಪ್ರಿಯತೆಗಾಗಿ ರಾಜಮಾತಂಗಿ ಆರಾಧನೆ ಹಾಗೂ ಮಂತ್ರ ಪಠಣೆ ಮಾಡುವುದು ಸಾಮಾನ್ಯ. ರಾಜಮಾತಂಗಿ ಆರಾಧನೆಯಿಂದ ಸಕಲವನ್ನೂ ಪಡೆಯಬಹುದಾಗಿದೆ.

ರಾಜಮಾತಂಗಿ ಆರಾಧನೆ ಪದ್ಧತಿ ಹೇಗೆ? ಮಾತಂಗಿಯನ್ನು ಪೂಜಿಸಬಹುದೇ? ಅಥವಾ ಬೇಡವೇ? ಮಾತಂಗಿ ಮೂಲ ಮಂತ್ರದ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಪವರ್​ ಟಿವಿಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಯಾರು ಕಲಾಕ್ಷೇತ್ರದಲ್ಲಿ ಹೆಸರನ್ನು ಮಾಡಬೇಕೆಂದುಕೊಳ್ಳುವರೋ, ಅವರು ಮೊದಲು ಮಾತಂಗಿ ದೇವಿಯನ್ನು ಆರಾಧನೆ ಮಾಡಿದರೆ ಅವರಿಗೆ ಉನ್ನತ ಸ್ಥಾನವನ್ನು ನೀಡುತ್ತಾಳೆ. ರಾಜಮಾತಂಗಿ/ರಾಜಶ್ಯಾಮಲೆಯನ್ನು ಆರಾಧನೆ ಮಾಡುವುದರಿಂದ ‘ರಾಜ್ಯಾಧಿಕಾರವನ್ನು’ ಪಡೆಯಬಹುದು ಎಂದು ಹೇಳಿದ್ದಾರೆ.

ಇಡೀ ನಮ್ಮ ಪ್ರಕೃತಿಯಲ್ಲಿ ಶಕ್ತಿಯ ಉಪಾಸನೆಗೆ ವಿಶಿಷ್ಟವಾದ ಸ್ಥಾನವಿದೆ. ಶಕ್ತಿಯ ಉಪಾಸಕರಿಗೆ ಪ್ರಕೃತಿಯ ಮುಕ್ತಿಯನ್ನು ಕರುಣಿಸುತ್ತಾ ಅಮೋಘವಾದ ವಿದ್ಯೆಯನ್ನೂ, ಜ್ಞಾನವನ್ನೂ, ಇಷ್ಠಾರ್ಥಗಳನ್ನು ಕರುಣಿಸುವ, ದಶಮಹಾವಿದ್ಯೆಯಲ್ಲ ವಿಶೇಷವಾಗಿ “ಮಾತಂಗಿ ದೇವಿಯ” ಆರಾಧನೆ, ಸಾಧಕನಿಗೆ ಜಯವನ್ನೂ, ವಿಶಿಷ್ಟವಾದ ಶಕ್ತಿಯನ್ನೂ, ವಿದ್ಯೆಯನ್ನೂ, ದುಷ್ಟಶಕ್ತಿಗಳಿಂದ ಮುಕ್ತಿಯನ್ನೂ, ಸಕಲ ಜ್ಞಾನವನ್ನೂ ನೀಡಿ ಸನ್ಮಾರ್ಗದಲ್ಲಿ ನಡೆಸುತ್ತಾಳೆ ಎಂದು ಭಕ್ತರಿಗೆ ಸಂದೇಶ ನೀಡಿದ್ದಾರೆ.

ರಾಜಾ ಮಾತಂಗಿ ದೇವಿಯ ಸಾಧನಾ ಮಂತ್ರಗಳು

ರಾಜ ಶ್ಯಾಮಲೆ ಆರಾಧನೆಯಿಂದ ಶನಿ ದೋಷ ಪರಿಹಾರ

ಯಾರ ಜಾತಕದಲ್ಲಿ ಬುಧನು ನೀಚನಾಗಿದ್ದರೆ ಅವರು ರಾಜಾ ಮಾತಂಗಿಯನ್ನು ಆರಾಧನೆ ಮಾಡಿದರೆ ಉತ್ತಮವಾದ ಜ್ಞಾನವನ್ನು ಪಡೆಯುವರು. ರಾಹುವಿನ ದೋಷ ಇದ್ದರೆ ನಿವಾರಣೆ ಆಗುತ್ತದೆ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES