Monday, May 20, 2024

ಪ್ರಜ್ವಲ್ ಕಾಮಪುರಾಣ ಬಿಚ್ಚಿಟ್ಟಿದ್ದಕ್ಕೆ ‘ಪವರ್ ಟಿವಿ’ಗೆ ಹೆಚ್​.ಡಿ. ಕುಮಾರಸ್ವಾಮಿ ಧಮ್ಕಿ

ಬೆಂಗಳೂರು : ತಮ್ಮ‌ ಕುಟುಂಬದ ಹುಳುಕು ಮುಚ್ಚಿಕೊಳ್ಳಲು ‘ಪವರ್ ಟಿವಿ’ ಮೇಲೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪ ಮಾಡ್ತಾ ಇದ್ದಾರೆ. ಕಲ್ಲು ಹೊಡಿಸೋ ಬಗ್ಗೆ, ಜನರನ್ನ ನುಗ್ಗಿಸೋ ಬಗ್ಗೆ ಮಾತಾಡಿ ‘ಪವರ್ ಟಿವಿ’ಗೆ ಧಮ್ಕಿಯನ್ನೂ ಹಾಕಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಾಮಕಾಂಡವನ್ನ ಬಯಲು ಮಾಡಿದ್ದೇ ನಿಮ್ಮ ಪವರ್ ಟಿವಿ. ಮಾಜಿ ಪ್ರಧಾನಿ ಕುಟುಂಬ ಅಂತ ಹಿಂದೆ ಮುಂದೆ ನೋಡದೇ ಸಂತ್ರಸ್ತೆಯರ ಪರ ನಿಂತು ಈಗಲೂ ಪವರ್ ಟಿವಿ ನ್ಯಾಯಕ್ಕಾಗಿ ಹೋರಾಡುತ್ತಿದೆ. ಎಷ್ಟೇ ಬೆದರಿಕೆಗಳು ಬಂದರೂ ಎದೆಯೊಡ್ಡಿ ಪೆನ್​ಡ್ರೈವ್ ಸತ್ಯಾಸತ್ಯತೆಯನ್ನ ಬಯಲು‌ ಮಾಡುತ್ತಿದೆ.

ಈ ಪ್ರಕರಣದಿಂದ ಮಾಜಿ‌ ಪ್ರಧಾನಿ ಕುಟುಂಬಕ್ಕೆ ಮಾತ್ರವಲ್ಲ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳಿಗೂ ತೀವ್ರ ಮುಜುಗರ ಉಂಟಾಗಿದೆ. ಸ್ವಯಂಕೃತ ಅಪರಾಧಕ್ಕೆ ಯಾರು ತಾನೇ ಜವಾಬ್ದಾರಾಗುತ್ತಾರೆ. ಇದನ್ನ ಅರ್ಥ ಮಾಡಿಕೊಳ್ಳದೇ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಪವರ್ ಟಿವಿಯನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಪವರ್ ಟಿವಿ ಚಾನೆಲ್​ಗೆ ಧಮ್ಕಿಯನ್ನೂ ಹಾಕಿದ್ದಾರೆ.

ಕಲ್ಲು ಹೊಡಿಸೋದು, ಕಚೇರಿಗೆ ನುಗ್ಗಿಸೋದಲ್ಲ

ಪವರ್ ಟಿವಿಯಲ್ಲಿ ‘ಪ್ರಜ್ವಲ್ ಭೂಗತ ಲೋಕ’ ಎಪಿಸೋಡ್ ಪ್ರಸಾರವಾಗಿತ್ತು. ಎಷ್ಟೇ ಥ್ರೆಟ್ ಬಂದರೂ, ಯಾರ್ಯಾರೋ ಇನ್ಫ್ಲೂಯೆನ್ಸ್ ಮಾಡಿದ್ರೂ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಬಗ್ಗಲಿಲ್ಲ. ಪ್ರಕರಣದ ಪ್ರಮುಖ ವ್ಯಕ್ತಿ ಕಾರ್ತಿಕ್ ನನ್ನ ಪತ್ತೆ ಹಚ್ಚಿ ಎಕ್ಸ್​ಕ್ಲೂಸಿವ್ ಸಂದರ್ಶನ ಮಾಡಿದ್ದರು. ಈ‌ ಇಂಟರ್ ವ್ಯೂ ನೋಡಿದ ಕುಮಾರಸ್ವಾಮಿ ಅದ್ಯಾಕೋ‌ ಫಸ್ಟ್ರೇಶನ್​ಗೆ ಹೋದಂತೆ ಕಾಣುತ್ತಿದೆ. ಖಾಸಗಿ ಚಾನೆಲ್ ಅವರು ಕಾರ್ತಿಕ್ ನನ್ನ ಟ್ರೈನಪ್‌ ಮಾಡುತ್ತಿದ್ದಾರೆ. ಕಲ್ಲು ಹೊಡಿಸೋದು, ಕಚೇರಿಗೆ ನುಗ್ಗಿಸೋದಲ್ಲ. ಇವರನ್ನು ಕಾನೂನು ವ್ಯಾಪ್ತಿಯಲ್ಲೇ ಮಟ್ಟ ಹಾಕಬೇಕಾಗುತ್ತದೆ ಎಂದು ಬೆದರಿಕೆ ಮಾತುಗಳನ್ನಾಕಿದ್ದಾರೆ.

ನಿಮಗೆ ಆರೋಪ‌‌ ಮಾಡುವ ನೈತಿಕತೆ ಇದ್ಯಾ?

ಇತ್ತ, ಮಹಿಳೆ ಅಪಹರಣ​ ಕೇಸ್​ನಲ್ಲಿ ಹೆಚ್.ಡಿ. ರೇವಣ್ಣ ಮೇ 14 ರವರೆಗೆ ಜೈಲುಪಾಲಾಗಿದ್ದಾರೆ. ಆದ್ರೆ, ಪ್ರಕರಣದ ಪ್ರಮುಖ‌ ಆರೋಪಿ ಪ್ರಜ್ವಲ್ ಇನ್ನೂ ಪತ್ತೆಯಾಗಿಲ್ಲ. ತಪ್ಪು ಮಾಡಿರುವವರಿಗೆ ನಿಜವಾಗಿಯೂ ರಕ್ಷಣೆ ಕೊಡುತ್ತಿರುವವರು ಯಾರು ಕುಮಾರಸ್ವಾಮಿಯವರೇ..? ಪವರ್ ಟಿವಿ ಬಗ್ಗೆ ಆರೋಪ‌‌ ಮಾಡುವ ನಿಮಗೆ ನೈತಿಕತೆ ಇದ್ಯಾ..? ಇಡೀ ರಾಜ್ಯ ಮಾತ್ರ ಅಲ್ಲ. ದೇಶಾದ್ಯಂತ ಪವರ್ ಟಿವಿ ಕೆಲಸಕ್ಕೆ‌ ಮೆಚ್ಚುಗೆ ವ್ಯಕ್ತವಾಗುತ್ತಿರುವಾಗ ನೀವ್ಯಾಕೆ ಗಲಿಬಿಲಿಯಾಗಿ ಮಾತನಾಡುತ್ತಿದ್ದೀರಿ? ಡೀಲ್ ಮಾಡಿಕೊಂಡಿದ್ದಾರೆ ಅಂತೆಲ್ಲಾ ಮಾತನಾಡ್ತಿರಲ್ಲ, ಸಂತ್ರಸ್ತೆಯರಿಗೆ ಸಿಗಬೇಕಾದ ನ್ಯಾಯದ ಬಗ್ಗೆ ಧ್ವನಿಯೆತ್ತಿದ್ದೀರಾ ಕುಮಾರಣ್ಣ..?

ಶೋಷಣೆ ವಿರುದ್ದ ಮಾಡ್ತಿರೋ ಹೋರಾಟ

ಒಟ್ನಲ್ಲಿ, ಕುಮಾರಸ್ವಾಮಿ ಮಾತಲ್ಲಿ ಹತಾಶೆ, ನಿರಾಶೆ ಎಲ್ಲಾ ಕಂಡು ಬರುತ್ತಿದೆ. ಹಾಗಂತ ಸತ್ಯ ಹೊರಗೆಳೆದ ಪವರ್ ಟಿವಿ ಬಗ್ಗೆ ಕೇವಲವಾಗಿ ಮಾತನಾಡಿ, ನೀವು ತುಚ್ಚರಾಗಬೇಡಿ. ನಮಗೆ ನಿಮ್ಮ ರಾಜಕೀಯ ಅವಶ್ಯಕತೆ ಇಲ್ಲ. ‘ದಾರಿ ತಪ್ಪಿದ ಮೊಮ್ಮಗ’ ಇದು ಯಾವುದೋ‌ ಕುಟುಂಬದ ವಿರುದ್ದ ಮಾಡಿರುವ ಸ್ಟೋರಿಯಲ್ಲ. ಸಂತ್ರಸ್ತ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯ, ಶೋಷಣೆ ವಿರುದ್ದ ಮಾಡುತ್ತಿರುವ ಹೋರಾಟ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಕುಮಾರಣ್ಣ.

RELATED ARTICLES

Related Articles

TRENDING ARTICLES