Monday, May 20, 2024

ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್ ಆಯ್ಕೆ : SRH ಮಣಿಸಿ 3ನೇ ಸ್ಥಾನಕ್ಕೇರುತ್ತಾ ರಾಹುಲ್ ಪಡೆ

ಬೆಂಗಳೂರು : ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಹೈದರಾಬಾದ್​ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಐಪಿಎಲ್​ನ 57ನೇ ಪಂದ್ಯ ನಡೆಯುತ್ತಿದೆ. ತವರು ಅಂಗಳದಲ್ಲೇ ಹೈದರಾಬಾದ್​ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಡಲು ರಾಹುಲ್ ಪಡೆ ಸಜ್ಜಾಗಿದೆ.

ಲಕ್ನೋ 11 ಪಂದ್ಯಗಳನ್ನು ಆಡಿದ್ದು 6ರಲ್ಲಿ ಗೆಲುವು ಹಾಗೂ 5 ಪಂದ್ಯಗಳನ್ನು ಸೋತಿದೆ. ಹೈದರಾಬಾದ್​ ಸಹ 11 ಪಂದ್ಯಗಳನ್ನು ಆಡಿದ್ದು 6 ಪಂದ್ಯಗಲ್ಲಿ ಗೆಲುವು ಹಾಗೂ 5 ಪಂದ್ಯಗಳನ್ನು ಕೈಚೆಲ್ಲಿದೆ. ಲಕ್ನೋ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 4ನೇ ಸ್ಥಾನದಲ್ಲಿದೆ. ಇಂದು ಗೆದ್ದ ತಂಡ ಚೆನ್ನೈ ತಂಡವನ್ನು ಹಿಂದಿಕ್ಕೆ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಲಿದೆ.

ಲಕ್ನೋ ಸೂಪರ್ ಜೈಂಟ್ಸ್

ಕ್ವಿಂಟನ್ ಡಿ ಕಾಕ್, ಕೆ.ಎಲ್. ರಾಹುಲ್(ನಾಯಕ/ವಿ.ಕೀ.), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಯಶ್ ಠಾಕೂರ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್

ಲಕ್ನೋ ಇಂಪ್ಯಾಕ್ಟ್ ಪ್ಲೈಯರ್ಸ್ : ಮಣಿಮಾರನ್ ಸಿದ್ಧಾರ್ಥ್, ಯುಧ್ವೀರ್ ಸಿಂಗ್, ದೇವದತ್ ಪಡಿಕ್ಕಲ್, ಆಷ್ಟನ್ ಟರ್ನರ್, ಅಮಿತ್ ಮಿಶ್ರಾ

ಸನ್‌ರೈಸರ್ಸ್ ಹೈದರಾಬಾದ್

ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿ.ಕೀ.), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ವಿಜಯಕಾಂತ್ ವ್ಯಾಸಕಾಂತ್, ಟಿ ನಟರಾಜನ್

ಹೈದರಾಬಾದ್ ಇಂಪ್ಯಾಕ್ಟ್ ಪ್ಲೇಯರ್ಸ್ : ಗ್ಲೆನ್ ಫಿಲಿಪ್ಸ್, ಉಮ್ರಾನ್ ಮಲಿಕ್, ಅಭಿಷೇಕ್ ಶರ್ಮಾ, ಮಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್

RELATED ARTICLES

Related Articles

TRENDING ARTICLES