Wednesday, May 1, 2024

ಶ್ರೀರಾಮನವಮಿಯಂದು ಮಜ್ಜಿಗೆ ಪಾನಕ ಕುಡಿದ ಭಕ್ತರಿಗೆ ವಾಂತಿ ಬೇದಿ!

ತುಮಕೂರು : ಶ್ರೀರಾಮನವಮಿ ಹಬ್ಬಕ್ಕೆ  ಮಜ್ಜಿಗೆ ಮತ್ತು ಪಾನಕ ಸೇವನೆ ಮಾಡಿ ಸುಮಾರು 25 ಕ್ಕೂ ಹೆಚ್ಚು ಮಂದಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕುಣಿಗಲ್​ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗೊಲ್ಲರಹಟ್ಟಿ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀರಾಮನವಿ ಹಬ್ಬದ ಹಿನ್ನೆಲೆ ಏ.17ರಂದು ಭಕ್ತರಿಗಾಗಿ ಪಾನಕ ಮಜ್ಜಿಗೆ ಮತ್ತು ಕೋಸಂಬರಿ ಮಾಡಿ ನೆನ್ನೆ ಮಧ್ಯಾಹ್ನ ಭಕ್ತರಿಗೆ ಹಂಚಲಾಗಿತ್ತು. ಪಾನಕ, ಮಜ್ಜಿಗೆ ಕುಡಿದ ಭಕ್ತರಿಗೆ ತಡರಾತ್ರಿ ಇದ್ದಕ್ಕಿದ್ದಂತೆ ವಾಂತಿ ಬೇದಿ ಶುರುವಾಗಿ ನಿತ್ರಾಣರಾಗಿದ್ದಾರೆ. ಕೂಡಲೇ ಇವರನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು, ಗಂಭೀರಗೊಂಡವರನ್ನು ಕುಣಿಗಲ್, ಎಡೆಯೂರು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಇದನ್ನೂ ಓದಿ: ಸೈಕಲ್​ ಸವಾರನಿಗೆ ಕಾರು ಡಿಕ್ಕಿ: ಸೈಕಲ್​ ಸವಾರ ದಾರುಣ ಸಾವು!

ಆಸ್ಪತ್ರೆಗೆ ದಾಖಲಾದವರ ಪೈಕಿ 13 ಪುರುಷರು, 12 ಮಹಿಳೆಯರು ಸೇರಿ 25 ಮಂದಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜನರು ಅಸ್ವಸ್ಥಗೊಂಡಿರುವುಕ್ಕೆ ನಿಖರವಾದ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ.

RELATED ARTICLES

Related Articles

TRENDING ARTICLES