Wednesday, May 22, 2024

ಪ್ರಜ್ವಲ್​ ರೇವಣ್ಣ ರಾಸಲೀಲೆ ಪ್ರಕರಣ: ಸಂಸ್ರಸ್ತ ಮಹಿಳೆಯರಿಗೆ ಆಮಿಷ, ಬೆದರಿಕೆ ಹಾಕುತ್ತಿರುವ ಸಾ.ರಾ ಮಹೇಶ್​

ಹಾಸನ: ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆ ವೀಡಿಯೋಗಳಿಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯನ್ನು ಪವರ್​ ಟಿವಿ ಪ್ರಸಾರ ಮಾಡುತ್ತಿದ್ದಂತೆ ಈ ಸುದ್ದಿ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ‘ದಾರಿತಪ್ಪಿದ ಮೊಮ್ಮಗ’ನ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಎಕ್ಸ್​ಕ್ಲೂಸಿವ್​ ಮಾಹಿತಿ ಹೊರಬಂದಿದ್ದು ಸಂತ್ರಸ್ತೆಯರಿಗೆ ಜೆಡಿಎಸ್​ ಮುಖಂಡರಿಂದ ಬ್ಲಾಕ್​ಮೇಲ್,​ ಸೆಟಲ್​ಮೆಂಟ್​ ಮಾತುಗಳು ಕೇಳಿಬರುತ್ತಿದೆ.

ಪ್ರಜ್ವಲ್ ಪೆನ್​ಡ್ರೈವ್​ ಪ್ರಕರಣದ ಬಗ್ಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಎಸ್ಐಟಿ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದೆ. ವಿಶೇಷ ತನಿಖಾ ತಂಡವು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದು ಸಂತ್ರಸ್ತೆಯರಿಂದ ಹೇಳಿಕೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ ಪೆನ್​ಡ್ರೈವ್​ ಪ್ರಕರಣ: ಸಂಕಷ್ಟದಿಂದ ಪಾರಾಗಲು ಹೋಮದ ಮೊರೆ ಹೋದ ರೇವಣ್ಣ

ಇನ್ನು, ತನಿಖೆ ನಡೆಯುತ್ತಿರುವ ಬೆನ್ನಲ್ಲೆ ಜೆಡಿಎಸ್​ ಮುಖಂಡ ಸಾ.ರಾ ಮಹೇಶ್​ ಸಂತ್ರಸ್ತ ಮಹಿಳೆಯರನ್ನು ಭೇಟಿ ಮಾಡಿ ಸೆಟಲ್​ಮೆಂಟ್​ಗಳನ್ನು ಮಾಡಿಕೊಳ್ಳುವ ಮಾತುಗಳನ್ನು ಆಡುತ್ತಿದ್ದು ಇದಕ್ಕೆ ಸಂತ್ರಸ್ತೆಯರು ಒಪ್ಪಿಕೊಳ್ಳದೆ ಇದ್ದಕ್ಕೆ ತನಿಖೆಗೆ ಸಹಕರಿಸದಂತೆ ಹಾಗು ಯಾವುದೇ ಹೇಳಿಕೆಯನ್ನು ನೀಡದಂತೆ, ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆಯರ ಕುಟುಂಬ ಖುದ್ದು ಪವರ್​ ಟಿವಿಗೆ ಮಾಹಿತಿ ನೀಡಿದೆ.

ಪವರ್ ಟಿವಿ ವರದಿ ಬೆನ್ನಲ್ಲೇ ಈಗಾಗಲೇ 12 ಕ್ಕು ಹೆಚ್ಚು ಸಂತ್ರಸ್ತ ಮಹಿಳೆಯರು ವಿಶೇಷ ತನಿಖಾ ತಂಡ (SIT) ಮುಂದೆ ಪ್ರಜ್ವಲ್​ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಲು ಮುಂದಾಗಿದ್ದಾರೆ. ಈ ನಡುವೆ ಜೆಡಿಎಸ್​ ಮುಖಂಡರು ಸಂತ್ರಸ್ತೆಯರ ಮನೆಗೆ ಭೇಟಿ ನೀಡಲು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES