Tuesday, May 21, 2024

ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ಸಂತ್ರಸ್ತರಯರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ವರದಿ

ಹಾಸನ: ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆ ವೀಡಿಯೋಗಳ ಪೆನ್​ಡ್ರೈವ್​ ವೀಡಿಯೋಗಳು ಇದೀಗ ಬಾರಿ ಸದ್ದು ಮಾಡುತ್ತಿದ್ದು ವೀಡಿಯೋಗಳು ಎಲ್ಲೆಡೆ ಹರಿದಾಡಿವೆ. ಇದರ ಬೆನ್ನಲ್ಲೇ ಸಂತ್ರಸ್ತೆಯರಿಗೆ ಬ್ಲಾಕ್​ ಮೇಲ್​ ಕರೆಗಳು ಬರುತ್ತಿರುವುದು ವರದಿಯಾಗಿದೆ.

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ನಲ್ಲಿರುವ ಸಂತ್ರಸ್ಥ ಮಹಿಳೆಯರಿಗೆ ಹಲವರು ಕರೆ ಮಾಡಿ ಹಣ ಕೊಡಿ ಇಲ್ಲ ವಿಡೀಯೋ ರಿಲೀಸ್​ ಮಾಡುತ್ತೇವೆ ಎಂದು ಸಂತ್ರಸ್ತರಿಗೆ ಬೆದರಿಕೆಯಾಗುತ್ತಿದ್ದಾರೆ.  ಈ ಕುರಿತು SIT ತನಿಖೆಯ ವೇಳೆ ಸಂತ್ರಸ್ಥೆಯರು ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರೇವಣ್ಣ, ಪ್ರಜ್ವಲ್​ಗೆ SIT ನೋಟೀಸ್​: ಪ್ರಕರಣಕ್ಕೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಎಂಟ್ರಿ

ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದ ಹಲವು ವೀಡಿಯೋಗಳಿರುವ ಮೊಬೈಲ್,​ ಪೆನ್​ಡ್ರೈವ್​ಗಳನ್ನು ಪ್ರಜ್ವಲ್​ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್​ ಬಳಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ವೀಡಿಯೋಗನ್ನು ಬೇರೆ ಯಾರಿಗಾದರೂ ಹಂಚಿರುವ ಸಾಧ್ಯತೆ ಇದೆಯೇ ಎಂದು ಕಾರ್ತಿಕ್​​ ವಾಟ್ಸಾಪ್​ ಖಾತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES