Wednesday, May 1, 2024

ಏರ್ಪೋರ್ಟ್ ವೀಡಿಯೋ ಚಿತ್ರೀಕರಿಸಿದ ಯೂಟ್ಯೂಬರ್ ವಿರುದ್ದ FIR ದಾಖಲು!

ಬೆಂಗಳೂರು : ಏರ್​ಪೋರ್ಟ್​ನ ನಿರ್ಭಂಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ವೀಡಿಯೋ ಹಂಚಿಕೊಂಡಿದ್ದ ಯೂಟ್ಯೂಬರ್ ನನ್ನು ಏರ್​ಪೋರ್ಟ್​ ಪೊಲೀಸರು ಬಂಧಿಸಿದ್ದು ಆತನ ವಿರುದ್ದ ಎಫ್​ಐಆರ್​ ದಾಖಲಿಸಿದ್ದಾರೆ.

ಯಲಹಂಕ ಮೂಲಕ ವಿಕಾಸ್​ ಗೌಡ ಬಂಧಿತ ವ್ಯಕ್ತಿ, ವಿಮಾನದಲ್ಲಿ ಪ್ರಯಾಣಿಸಲು ಟಿಕೇಟ್​ ಖರೀದಿಸಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ್ದ ವಿಕಾಸ್​, ವಿಮಾನದಲ್ಲಿ ಪ್ರಯಾಣಿಸದೇ ಸುಮಾರು ನಾಲ್ಕೈದು ಗಂಟೆಗಳ ಕಾಲ ಏರ್ಪೋರ್ಟ್​ನಲ್ಲೇ ಇದ್ದುಕೊಂಡು ವೀಡಿಯೋ ಚಿತ್ರೀಕರಣಕ್ಕೆ ನಿರ್ಬಂಧಿತ ಪ್ರದೇಶವಾದ ರನ್​ ವೇ ಚಿತ್ರೀಕರಿಸಿದ್ದಾನೆ, ಚಿತ್ರೀಕರಿಸಿದ್ದಲ್ಲದೇ ತನ್ನ ಯೂಟ್ಯೂಬ್​ ಚಾನಲ್​ನಲ್ಲೂ ಹಂಚಿಕೊಂಡಿದ್ದ.

ಇದನ್ನೂ ಓದಿ: ಇಂದು ಹಿರಿಯ ನಟ ದ್ವಾರಕೀಶ್‌ ಅಂತ್ಯಕ್ರಿಯೆ

ಈ ವೀಡಿಯೋ ಹಂಚಿಕೊಳ್ಳುವಾಗ ವೀಮಾನ ನಿಲ್ದಾಣಕ್ಕೆ ಟಿಕೇಟ್​ ಖರೀದಿಸದೇ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಣ್ತಪ್ಪಿಸಿ ಪ್ರವೇಶಿಸಿರುವುದಾಗಿ ಮತ್ತು ಕಳೆದ 24 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಇದ್ದೆ ಎಂದಿದ್ದಾನೆ, ನಿರ್ಬಂಧಿತ ರನ್​ವೇ ಚಿತ್ರೀಕರಣ ಮಾಡಿ ಅಪ್ಲೋಡ್ ಮಾಡಿದ್ದಾನೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಈ ವೀಡಿಯೋವನ್ನು ಖುದ್ದು ವೀಕ್ಷಿಸಿ ವಿಕಾಸ್​ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಏರ್ಪೋರ್ಟ್​ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್​ಐಆರ್​ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES