Friday, May 10, 2024

ಏಪ್ರಿಲ್ 24ರಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ : ಎರಡು ದಿನ ಏನೆಲ್ಲಾ ಮಾಡಬಾರದು ಗೊತ್ತಾ?

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನಲೆ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ 144 ಸೆಕ್ಷನ್​ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಆದೇಶ ಹೊರಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ‌ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಏಪ್ರಿಲ್ 24ರ ಸಂಜೆ 6 ಗಂಟೆಯಿಂದ ಏಪ್ರಿಲ್ 26ರ ರಾತ್ರಿ 12 ಗಂಟೆಯವರೆಗೆ 48 ಗಂಟೆಗಳ ಕಾಲ 144 ಸೆಕ್ಷನ್ (ಪ್ರತಿಬಂಧಕಾಜ್ಞೆ) ಜಾರಿ ಮಾಡಲಾಗಿದೆ.

ಚುನಾವಣಾ ಅಭ್ಯರ್ಥಿ ಮತ್ತು ಬೆಂಬಲಿಗರು ಸೇರಿ 5 ಜನಕಿಂತ ಹೆಚ್ಚು ಗುಂಪು ಸೇರುವಂತಿಲ್ಲ. ಮೆರವಣಿಗೆ, ಸಭೆ, ಸಮಾರಂಭ ಸೇರುವುದನ್ನು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರ, ಬಡಿಗೆ, ಬಂದೂಕು, ಲಾಠಿ, ದೊಣ್ಣೆ, ಚಾಕು ದೇಹಕ್ಕೆ ಅಪಾಯನ್ನುಂಟುಮಾಡುವ ಯಾವುದೇ ಮಾರಕಾಸ್ತ್ರ ಬಳಸುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮತಗಟ್ಟೆಗಳ 100 ಮೀಟರ್ ಒಳಗೆ ಚುನಾವಣಾ ಪ್ರಚಾರ ನಿಷೇಧ ಮಾಡಲಾಗಿದೆ. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್ ಯಾವುದೇ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ಕಲ್ಲುಗಳು, ಕ್ಷಾರ ಪದಾರ್ಥ, ಸ್ಪೋಟಕ ವಸ್ತುಗಳು, ದಾಹಕ ವಸ್ತುಗಳ ಇತರೆ ವಸ್ತುಗಳ ಪ್ರತಿಕೃತಿ ದಹನ ಮಾಡುವಂತಿಲ್ಲ.

ಹಾಡುಗಳು, ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ

ಪ್ರಚೋದನಕಾರಿ ಭಾಷಣ, ರಾಜಕೀಯ ಸಂಬಂಧಿತ ಬಹಿರಂಗ ಘೋಷಣೆ, ವಾದ್ಯ ಬಾರಿಸುವುದು, ನಕಲಿ ಪ್ರದರ್ಶನಕ್ಕೆ ಅವಕಾಶವಿಲ್ಲ. ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ, ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ.

ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ನಿಷೇಧ

ಮತಗಟ್ಟೆಗಳ ಸುತ್ತ 100 ನೂರು ಮೀಟರ್ ಅಂತರದಲ್ಲಿ ಮೊಬೈಲ್ ಪೋನ್, ಕಾಡ್ಲೆಸ್, ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಗೆ ಅವಕಾಶ ಇರುವುದಿಲ್ಲ. ಗೌಪ್ಯತೆಗೆ ಧಕ್ಕೆ ಛಾಯಚಿತ್ರ, ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿದೆ. ಮತದಾರರಲ್ಲದ, ಚುನಾವಣಾ ಪ್ರಚಾರಕ್ಕೆ ಕರೆತಂದ ಯಾವುದೇ ಪಕ್ಷದ ರಾಜಕೀಯ ಕಾರ್ಯಕರ್ತರ ಕ್ಷೇತ್ರ ವ್ಯಾಪ್ತಿ ಹೊರಗಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

RELATED ARTICLES

Related Articles

TRENDING ARTICLES